= ಬಲವುಳ್ಳವರು ಯಾರೋ ಅವರು. ಬಾಲವಂತ (ಅಂದರೆ ಹನುಮಂತ)
= ಶಕ್ತಿಮಾನ್ ಅಥವಾ ಶಕ್ತಿಂಆಃ
= ಚಳಿಯಲ್ಲಿ ಕಂಬಲವಂತರೇ ಬಲವಂತರು
= ಕೈಯ್ಯಲ್ಲಿ ಬಂದೂಕು ಇದ್ದರೂ ಧೈರ್ಯ ಇಲ್ಲದಿದ್ದರೆ ಆತ ಬಲವಾನ್ ಅಲ್ಲವೇ ಅಲ್ಲ
= ಹೊಕ್ಕು ಕುಳಿತುಕೊಳ್ಳಲು ಒಂದು ಬಿಲ (ಮನೆ) ಇರುವವರು
= ಒಪ್ಪಿಗೆಯಿಲ್ಲದೇ ಇದ್ದರೂ ಒತ್ತಾಯದಿಂದ ಒಪ್ಪಿಸುವುದು
= ಅತಿಯಾದ ಆಚಾರ
= ತಡವಾಗಬಾರದೆಂಬ ಒತ್ತಡ
= ನೀವು ಹೆಂಡತಿಯನ್ನು ಬಲವಂತ ಮಾಡಿದರೆ ಆಕೆ ನಿಮ್ಮ ಮೇಲೆ ಬಲಪ್ರಯೋಗ ಮಾಡುತ್ತಾಳೆ
= ಬಲವಂತವಾಗಿ ಪಡೆದಿದ್ದು ಯಾವುದೂ ಆಗಲಾರದು ಸ್ವಂತ
= ಹಾಗೆ ಮಾಡಬೇಕು, ಹೀಗೆ ಮಾಡಬೇಕೆಂಬ ಕೇವಲ ಹಂಬಲವಂತರೇ ಜಾಸ್ತಿ,
= ಅಂಬಲಿವಂತರೇ ನಿಜವಾದ ಬಲವಂತರು
= ಸ್ವಂತ ಗೃಹ ನಿರ್ಮಿಸಿಕೊಡಬೇಕೆಂಬ ಆಗ್ರಹ
= ವಿಮಾ ಏಜೆಂಟರ ಮೂಲಮಂತ್ರ ಮತ್ತು ಮೂಲತಂತ್ರ
= ಆಮಿಷ ಕೊಟ್ಟಾದರೂ ಸ್ವಾಧೀನಪಡಿಸಿಕೊಳ್ಳುವಿಕೆ
ವಿಶ್ವನಾಥ ಸುಂಕಸಾಳ