ಮಹೇಶ, ನೆಲಮಂಗಲ
ಜೀವನ ಕರೆದುಕೊಂಡು ಹೋದಕಡೆ ನಾವು ಹೋಗಬೇಕಾ? ನಾವು ಹೋದ ಕಡೆ ಜೀವನ ಕರೆದುಕೊಂಡು ಹೋಗಬೇಕಾ?
ಕೆಲವೊಮ್ಮೆ ಎರಡೂ ಒಂದೇ ಆಗಿರುತ್ತದೆ!
ಪ್ರಕಾಶಕುಮಾರ್, ಶಿಕಾರಿಪುರ, 9886016328
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯು ಚುನಾವಣೆಗೆ ಮುನ್ನ ನೀಡುವ ಅಶ್ವಾಸನೆಗಳನ್ನು ಗೆದ್ದ ನಂತರ ಈಡೇರಿಸುವುದಿಲ್ಲ ಯಾಕೆ?
ಪ್ರೀತಿಸುವಾಗ ಕೊಟ್ಟ ಎಷ್ಟೋ ಭರವಸೆಗಳನ್ನು ಮದುವೆಯಾದ ನಂತರ ಈಡೇರಿಸಲು ಆಗುವುದಿಲ್ಲ!
ವಿ. ಹೇಮಂತಕುಮಾರ, 9035992900
- ಅಪಘಾತಕ್ಕೀಡಾದವರನ್ನು ಕರೆತರಲು ಹೋಗುತ್ತಿದ್ದ ಆ್ಯಂಬುಲೆನ್ಸ್ ವ್ಯಾನ್ಗೇ ಅಪಘಾತವಾದರೆ?
ಹಾರ್ಟ್ ಆಪರೇಷನ್ ಮಾಡುತ್ತಿದ್ದ ವೈದ್ಯರಿಗೇ ಹಾರ್ಟ್ ಅಟ್ಯಾಕ್ ಆದಂಗಾಯ್ತು!
ನೇರಲಗುಡ್ಡ ಶಿವಕುಮಾರ, ಶಿರಾ, 9480343742
ಹೆಂಗಸರ ಬಳಿ ಉಳಿದುಕೊಳ್ಳಬಹುದಾದ ಒಂದೇ ಒಂದು 'ರಹಸ್ಯ' ಯಾವುದು?
ಅವರ ವಯಸ್ಸಿನದು!
ಎಂ.ಬಿ. ಕೃಷ್ಣಮೂರ್ತಿ, 9449130531
ಗುಣವಂತನನ್ನು ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲ. ಎನ್ನುವಂತೆ ಹಣವಂತನನ್ನು ಗುಣಗಾನ ಮಾಡಲು?
ಹಣವೇ ಸಿಗುತ್ತಿಲ್ಲ!
ಬಾಣಭಟ್ಟ