ಎ.ಎಚ್. ಪ್ರಕಾಶಕುಮಾರ, 9886016328.ಕೆಲವು ಚಲನಚಿತ್ರಗಳಲ್ಲಿ ಖಳನಾಯಕ ಸಾಯುವಾಗ ಒಳ್ಳೆಯವನಾಗುವುದೇಕೆ?.ಸತ್ತ ಮೇಲೆ ಒಳ್ಳೆಯವರಾಗುವುದು ತೀರಾ ಕಾಮನ್. ಅದ್ಕೇ ಸ್ವಲ್ಪ ಚೇಂಜ್ ಇರ್ಲಿ ಅಂತ!.ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106.ಜನನಕ್ಕೂ ಮರಣಕ್ಕೂ ವ್ಯತ್ಯಾಸವೇನು?.ಹುಟ್ಟಿದಾಗ ನಾವು ಅಳುತ್ತೇವೆ. ಸತ್ತಾಗ ಬೇರೆಯವರು!.ಪಿ.ಜೆ. ರಾಘವೇಂದ್ರ, ಕುವೆಂಪುನಗರ, ಮೈಸೂರು.ನೋಟ, ನೋಟು, ನೋಟಾ ವ್ಯತ್ಯಾಸ?.ನೋಟ ಸ್ವಂತದ್ದು, ನೋಟು ಪರರದ್ದು, ನೋಟಾ ಯಾರದ್ದೂ ಅಲ್ಲ!.ಕೊಕ್ಕಡ ವೆಂಕಟ್ರಮಣ ಭಟ್, ಮಂಡ್ಯ.ಪ್ರಾಣೇಶ್ ಮತ್ತು ಮಹಾಮನಿ ಏಕೆ ನಗುವುದಿಲ್ಲ?.ಹಳೇ ಜೋಕಿಗೆ ನಗುವವರು ಜನ ಮಾತ್ರ!.ಸಿ. ನಾಗರಾಜ ಅರದೋಟ್ಲು, ಭದ್ರಾವತಿ.ಇಂದಿನ ಶಿಕ್ಷಣ ಹಲವರಿಗೆ ಒಡಲು ತುಂಬುವ ಸಾಧನವಾಗಿದೆಯಲ್ಲ?.ಕೆಲವರ ಒಡಲಾದರೂ ತುಂಬುತ್ತಿದೆಯಲ್ಲ ಅದೇ ಸಮಾಧಾನ!. ಬಾಣಭಟ್ಟ.Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics