ತೆನೆ ಪಕ್ಷದವರು ಅಳುತ್ತಾರೆ. ಹೂ ಪಕ್ಷದವರು ನಗುತ್ತಾರೆ. ಕೈಪಕ್ಷದವರು?

Updated on: 

ಸೋಮು, ಸಂತೇಮರಹಳ್ಳಿ, 9538474739
ನೀನು ಯಾವ ಜಾತಿ ಎಂದು ಕೇಳುವ ಮನುಷ್ಯರು ಸತ್ತಾಗ ಹೂಳುವವರು ನೀನು ಯಾವ ಜಾತಿ ಎಂದು ಕೇಳುತ್ತಾರೇನು?
ಹೂಳುವವರಿಗೆ ಬೇಕಿರುವುದು ದೇಹದ ಗಾತ್ರ ಮಾತ್ರ!

ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ದಿನದ ಕೂಲಿ ದರ 300 ಆಗಿರುವಾಗ  ಸರ್ಕಾರ ಅಕ್ಕಿಯ ದರ 1 ಮಾಡಿರುವುದು ಸರಿಯೇ?
ಅದಕ್ಕೇ ಬೇಳೆ ಮತ್ತು ಇತರ ದರಗಳನ್ನು ಏರಿಸಲಾಗಿದೆ!

ಚಿರಪ್ರಭ ನಂಜನಗೂಡು, 8553793107
ತೆನೆ ಪಕ್ಷದವರು ಅಳುತ್ತಾರೆ. ಹೂ ಪಕ್ಷದವರು ನಗುತ್ತಾರೆ. ಕೈಪಕ್ಷದವರು?
ಎಲ್ಲದಕ್ಕೂ ಬೇರೆಯವರತ್ತ ಕೈ ತೋರಿಸುತ್ತಾರೆ!

ಕೆ.ಎಂ. ಲಿಂಗರಾಜು, 9916021365
ಪಾಕಿಸ್ತಾನದಲ್ಲಿ ಹಿಂದು ಮತ್ತು ಸಿಖ್ಖರ ಮೇಲಾಗುತ್ತಿರುವ ಅನ್ಯಾಯ, ದೌರ್ಜನ್ಯಗಳನ್ನು ಭಾರತೀಯರೇಕೆ ಖಂಡಿಸುತ್ತಿಲ್ಲ?
ಇನ್ನೊಬ್ಬರ ಮನೆಯ ವಿಷಯಕ್ಕೆ ನಾವು ತಲೆಹಾಕಬಾರದು ಎಂಬ ಸಭ್ಯತೆಯಿಂದ!

ವಿ. ಹೇಮಂತಕುಮಾರ, 9035992900
ಸ್ಕೂಲ್ ಮುಂದೆ ನಿಧಾನವಾಗಿ ಚಲಿಸಿ ಎಂಬ ಬೋರ್ಡ್ ಇರುತ್ತದೆ. ಕಾಲೇಜ್ ಮುಂದೆ?
ಬೋರ್ಡ್ ಇಲ್ಲದಿದ್ದರೂ ನೀವು ನಿಧಾನವಾಗಿ ಹೋಗುತ್ತೀರೆಂದು ಗೊತ್ತು!

 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com