ಸ್ವಂತಿಕೆ
= ಇದಕ್ಕೆ ಕಾಪಿರೈಟ್ ಅನ್ವಯಿಸುತ್ತದೆ
= ಹುಟ್ಟಿನಿಂದ ಬಂದ ಗುಣಗಳೆಲ್ಲ ಸ್ವಂತದ್ದೇ
= ಗಳಿಸಿದ್ದು ಸ್ವಂತದ್ದು, ಅನುಸರಿಸಿ ಪಡೆದದ್ದು ಪರರದ್ದು
= ನಿಜವಾದ ಶ್ರೀಮಂತಿಕೆ
= ಹಾಗೆ ನೋಡಿದರೆ ಜಗತ್ತಿನಲ್ಲಿ ಸ್ವಂತದ್ದೆಂದು ಯಾವುದೂ ಇಲ್ಲ. ಹಾಗಾಗಿ ಕಾಪಿ ಮಾಡುವುದೇ ಸ್ವಂತಿಕೆ
= ನಮ್ಮ ಅಂತಿಕವೇ (ಹತ್ತಿರ) ಯಾವತ್ತೂ ಇರುವ ಸ್ವಭಾವದ್ದು ಇದು
= ಕೆಲವರಿಗೆ ಸ್ವಂತಿಕೆ ಏನೂ ಇರುವುದಿಲ್ಲ. ಆದರೆ ಪರರನ್ನು ಸ್ವಂತಿಕೆಯನ್ನು ದೂಷಿಸುವುದೇ ಅವರ ಸ್ವಂತಿಕೆ
= ಸ್ವಂತಕ್ಕೆಂದು ದೇವರು ಕೊಟ್ಟು ಕಳುಹಿಸಿದ ಹುಟ್ಟುಗುಣ
= ಅನನ್ಯತೆ
= ರೆಸಿಪಿ ಒಂದೇ. ರುಚಿ ಮಾತ್ರ ಭಿನ್ನ. ಅದೇ ಸ್ವಂತಿಕೆ
= ಯೂನಿಕ್ ಐಡೆಂಟಿಟಿ
= ಅನುಕರಣೆ ಮಾಡಲಾಗದ್ದು
= ನೀವೆಷ್ಟು ಕೂಗಿಕೊಂಡರೂ ಬದಲಾಯಿಸಲಾಗದ ನಿಮ್ಮವರ ಗುಣ
= ಜ್ಞಾನ ಮತ್ತು ಅರ್ಹತೆ ಇವೆರಡು ನಿಜವಾದ ಸ್ವಂತಿಕೆಗಳು
= ಇದು ಸ್ವಂತ ತಿಕ ಇದ್ದ ಹಾಗೆ. ನೀವು ಮಾತ್ರ ಬಳಸಬಹುದು
ವಿಶ್ವನಾಥ ಸುಂಕಸಾಳ
vishwasunkasal@yahoo.com