ಒಬ್ಬ ವ್ಯಕ್ತಿಗೆ ಸ್ವಂತ ಆಲೋಚನೆಯಿರಬೇಕೆಂದರೆ ಏನು ಮಾಡಬೇಕು?

Updated on: 

ಆರೀಫ್ (ಅರಿ), ದಾವಣಗೆರೆ, 9964280609
ಹುಡುಗಿಯರು ಪ್ರೀತಿ ಮಾಡೋ ಹುಡುಗರಿಗೆ ಕೋತಿ, ಚಿನ್ನು, ಪುಟ್ಟ ಎಂಬ ವಿಭಿನ್ನ ಹೆಸರುಗಳಿಂದ ಕರೆಯುವುದೇಕೆ?
ಪ್ರೀತಿ ಹೆಚ್ಚಾದರೆ ಕೋತಿ ಥರಾನೇ ಆಡೋದ್ರಿಂದ!

ನೇತ್ರಾ ಆನೆಕೇರಿ ಬೀದಿ, ಮಂಡ್ಯ, 8970452188
ಒಬ್ಬ ವ್ಯಕ್ತಿಗೆ ಸ್ವಂತ ಆಲೋಚನೆಯಿರಬೇಕೆಂದರೆ ಏನು ಮಾಡಬೇಕು?
ಸದಾ ಸ್ವಂತದ ಬಗ್ಗೆಯೇ ವಿಚಾರ ಮಾಡಬೇಕು!

ಮೊಳಕಾಲ್ಮೂರು ಸುರೇಶ, ಬಳ್ಳಾರಿ
ಚುನಾವಣೆ ಪ್ರಚಾರದಲ್ಲಿ ಅಭ್ಯರ್ಥಿಗಳು ಬಿಸಿಲಿನ ಝಳದಲ್ಲಿ ಗಂಟಲು ಹರ್ಕೋತಾರೆ. ಕೇಳುವವರು ನಿದ್ರೆಗೆ ಶರಣಾಗುತ್ತಾರೆ ಯಾಕೆ ಹೀಗೆ?
ಇದಕ್ಕೆ ಸೇಡು ತೀರಿಸಿಕೊಳ್ಳಲೆಂದೇ ರಾಜಕಾರಣಿಗಳು ಗೆದ್ದ ನಂತರ ನಿದ್ರೆಹೋಗುವುದು!

ವಿ. ಹೇಮಂತಕುಮಾರ, 9035992900
ಲೇಡಿ ಡಾಕ್ಟರ್‌ಗಳು ಮತ್ತು ನರ್ಸ್‌ಗಳು ಕೈಗೆ ಬಳೆ ತೊಡುವುದಿಲ್ಲ ಏಕೆ?
ಕೈಲಾಗದವರು ಬಳೆ ತೊಟ್ಕೊಳ್ಳಿ ಅಂತಾರಲ್ಲ ಅದಿಕ್ಕೆ ಕೈಲಾಗದವರಲ್ಲ ಎಂಬುದನ್ನು ತೋರಿಸಲು!

ಹರಳಹಳ್ಳಿ ಪುಟ್ಟರಾಜು, 9632838088
ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯವಾ? ಯಡಿಯೂರಪ್ಪಗೆ ಬಿಜೆಪಿ ಅನಿವಾರ್ಯವಾ?
ಮರಕ್ಕೆ ತೆಂಗಿನಕಾಯಿ ಅನಿವಾರ್ಯವಾ, ತೆಂಗಿನ ಕಾಯಿಗೆ ಮರ ಅನಿವಾರ್ಯವಾ?

 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com