ಬಿಡು
= ಇದಕ್ಕೆ ಎರಡೇ ಮಾರ್ಗ. ಬಿಟ್ಟುಬಿಡುವುದು ಮತ್ತು ಕೊಟ್ಟುಬಿಡುವುದು
= ಬಿಟ್ಟುಕೊಡುವುದು ಮತ್ತು ಕೊಟ್ಟುಬಿಡುವುದು ಎರಡೂ ಕಷ್ಟದ ಕೆಲಸವೇ
= ಹಿಡಿದದ್ದನ್ನು ಮಾತ್ರ ಬಿಡಲು ಸಾಧ್ಯ. ಆದರೆ ಒಮ್ಮೆ ಹಿಡಿದರೆ ಬಿಡುವುದು ಕಷ್ಟ
= ಕಟ್ಟಿಕೊಂಡಿದ್ದನ್ನಾದರೂ ಬಿಡಬಹುದು, ಇಷ್ಟಪಟ್ಟಿದ್ದನ್ನು ಬಿಡಲಾಗದು
= ತೊಡುವುದನು ಕಲಿತವ ಬಿಡುವುದನೂ ಕಲಿಯಬೇಕು
= ಮನಸಲ್ಲಿ ಬೀಡು ಬಿಟ್ಟ ಅಪಸವ್ಯಗಳಿಗೆ ನಾವು ಹೇಳಬೇಕಾದ ಪಾಠ
= ಬೇಡು ಶಬ್ದದ ಪೂರ್ವಾವಸ್ಥೆ
= ಮೋಕ್ಷ ಮಾರ್ಗದ ಇಂಧನ
= ಕೊಡುವ ಉದ್ದೇಶದಿಂದ ಬಿಡುವುದು ತ್ಯಾಗವೆನಿಸುತ್ತದೆ
= ಬೇಡವೆಂಬ ಕಾರಣಕ್ಕೆ ಬಿಡುವುದು ಪರಿತ್ಯಾಗವೆನಿಸುತ್ತದೆ
= ಬೆಂಬಿಡದೇ ಕಾಡುವ ಕೆಟ್ಟ ಕನಸುಗಳಿಗೆ ದೊರಕಿಸಬೇಕಾದ ಗತಿ
= ಕೆಲಸ ಹಿಡಿಯುವಾಗಲೇ ನಾವು ಕೇಳಿಸಿಕೊಳ್ಳಲು ಸಿದ್ಧರಿರಬೇಕಾದ ಶಬ್ದ
= ನಶ್ವರತೆಯನ್ನು ಪ್ರತಿಪಾದಿಸುವ ಶಬ್ದ
ವಿಶ್ವನಾಥ ಸುಂಕಸಾಳ
vishwasunkasal@yahoo.com