ರಾಜಕಾರಣ

Updated on: 

ರಾಜಕಾರಣ
= ವಿನಾಕಾರಣ ಕಲಹಾಗ್ನಿ ಹೊತ್ತಿಸುವ ದೊಂದಿ
= ರಾಜನಾಗಲೊಂದು ಕಾರಣ (ಮೂಲ)
= ನಿವೃತ್ತಿಯಿಲ್ಲದ ವೃತ್ತಿ
= ಮನುಜನ ಮನಸ್ಸಿನೊಳಗಿರುವ ಕೊಳಕಿನ ಅನಾವರಣ
= ಹಲವು ವಿಧದ ಟ್ಯಾಕ್‌ಟಿಕ್ಸ್ ನಡೆಸಬೇಕಾಗುವುದರಿಂದ ಇದು ಕಿಕಔಘ-ಖಿಖಐಈಓಖ
= ಇಲ್ಲಿ ಕಣ್ಣೀರು ಸುರಿಸಿ ನಟಿಸಿದರೆ ಕಣ್ಣೀರ ಹನಿಗೊಂದೊಂದು ಮತ ಖಚಿತ
= ಹೀಗಳೆಯುವುದು ಮತ್ತು ನಂತರ ಅಲ್ಲಗಳೆಯುವುದು
= ಕೆಸರಿನಲ್ಲಿ ನಡೆಸುವ ಆಟ- ಈ ಕೆಸರೆರಚಾಟ.
= ಸತ್ಯನಾಶವಾಗುತ್ತೇನೆಂದು ಗೊತ್ತಿದ್ದರೂ ಸತ್ಯದ ನಾಶ ಮಾಡಿ ಮೆರೆಯುವುದು
= ಸತ್ಯ, ಪ್ರಾಮಾಣಿಕತೆ, ಸರಳತೆ ಇತ್ಯಾದಿ ಶಬ್ದಗಳ ವಿರುದ್ಧಾರ್ಥಕ ಶಬ್ದ
= ಕಣ ಕಣದಲ್ಲೂ ಹಣ ಸಂಪಾದನೆಯ ಬುದ್ಧಿ ಬಂದವರ ರಣ
= ಆಚಾರ ವಿಚಾರಗಳನ್ನೆಲ್ಲ ಮೂಟೆಕಟ್ಟಿ ಪ್ರಚಾರಕ್ಕೇ ಹೆಚ್ಚು ಆದ್ಯತೆ ನೀಡುವ ಕ್ಷೇತ್ರ
= ಚುನಾವಣೆಯಲ್ಲಿ ಚಲಾವಣೆಗೊಳ್ಳಲು ಮೊದಲು ತಳವೂರಬೇಕಾದ ಭೂಮಿಕೆ
= ಪತ್ರಿಕೆಗಳಲ್ಲಿ ಮುಖಪುಟದಲ್ಲಿ ರಾರಾಜಿಸುವ ವಿಷಯ
= ರಾಜಕಾರಣಕ್ಕೆ "ಇಳಿಯಬೇಕಾಗುತ್ತದೆ". ಕಾರಣ ಇದು ಇರುವುದು ಕೆಳಗೆ

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com