ಮೊಳಕಾಲ್ಮೂರು ಸುರೇಶ, ಬಳ್ಳಾರಿ
ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ವಸತಿಭಾಗ್ಯ, ಹೆರಿಗೆ ಭಾಗ್ಯ ಇಷ್ಟೆಲ್ಲಾ ಕೊಟ್ಟರೂ ಇನ್ನೂ ಇದ್ದಾರಲ್ಲ ದೌರ್ಭಾಗ್ಯರು?
ಅವರಿದ್ದರೆ ತಾನೇ ರಾಜಕಾರಣಿಗಳಿಗೆ ಕೊಟ್ಟು ದೊಡ್ಡವರಾಗುವ ಸೌಭಾಗ್ಯ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಸೀರಿಯಲ್ಗಳೇಕೆ ಬೇಗ ಮುಗಿಯೋದಿಲ್ಲ?
ಅವು ಸಮಸ್ಯೆಗಳ ಹಾಗೆ. ಒಂದು ಮುಗಿದರೆ ಇನ್ನೊಂದು ಶುರು!
ಚಿರಪ್ರಭ ನಂಜನಗೂಡು, 8553793107
ಅಕ್ಷರ ಲೋಕದ ನಾಯಕರು ಬಹಿರಂಗವಾಗಿ ಕೈಕುಲುಕಲು ಕಾರಣ ಏನಿರಬಹುದು?
ಅವರು ಎಷ್ಟೊತ್ತಿಗೆ ಕೈ ಕುಲುಕುತ್ತಾರೆ, ಎಷ್ಟೊತ್ತಿಗೆ ಕೈ ಕೊಡುತ್ತಾರೆ ಎಂಬುದಕ್ಕೆ ಖಾತ್ರಿಯಿಲ್ಲ.
ಪಿ.ಜಿ. ರಾಜ್, ಶಿವಮೊಗ್ಗ, 9739363071
ನಮ್ಮ ಹೆಂಡ್ತಿ ಸುರಸುಂದರಿ ಆಗಿದ್ದರೂ ಪಕ್ಕದ ಕುರೂಪಿ ಹೆಂಗಸನ್ನು ಹೊಗಳುತ್ತೇವೆ ಯಾಕೆ?
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ!
ನೇರಲಗುಡ್ಡ ಶಿವಕುಮಾರ, 9480343742
'ಹೆಂಡತಿ' ಮತ್ತು 'ತೆರಿಗೆ' ನಡುವಿನ ಸಾಮ್ಯತೆಯೇನು?
ಏರಡರ ಭಾರವೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತದೆ!
ಬಾಣಭಟ್ಟ