ನೇತ್ರಾ ಆನೆಕೆರೆಬೀದಿ, ಮಂಡ್ಯ, 897052188
ನಮ್ಮ ದೇಶ ಮತ್ತೆ ಪರಕೀಯರ ದಾಳಿಗೆ ಒಳಗಾಗುತ್ತಾ?
ನೀವು ಸೋನಿಯಾ ಗಾಂಧಿಯನ್ನು ಗುರಿಯಾಗಿಸಿ ಹೀಗೆಲ್ಲ ಹೇಳಿದರೆ ಕಾಂಗ್ರೆಸ್ನವರು ಕೋಪಿಸ್ಕೋತಾರೆ!
ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಸಿನಿಮಾ ತಾರೆಯರು ಪಕ್ಷಾಂತರಿಗಳಾಗುತ್ತಿರುವುದು ಯಾವುದರ ಮುನ್ಸೂಚನೆ?
ರಾಜಕೀಯ ರಂಗೇರುವುದರ ಸೂಚನೆ!
ವಿ. ಹೇಮಂತಕುಮಾರ, 9035992900
ಮಾನಸ ಗಂಗೋತ್ರಿಯಲ್ಲಿ ಪರಿಚಯವಾದ ಅವಳು ಮಾನಸ ಸರೋವರದಲ್ಲಿ ಮರೆಯಾದಳಲ್ಲ?
ಮಂಗಳ ಗಂಗೋತ್ರಿಯಲ್ಲಿ ಸಿಕ್ಕವಳು ಸಿಂಬಳ ಗಂಗೋತ್ರಿ ಹರಿಸಿದಂಗಾಯ್ತು!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಸತ್ತವರ ಮೆರವಣಿಗೆ ಸಮಯದಲ್ಲಿ ಶವದ ಮೇಲೇಕೆ ಚಿಲ್ಲರೆ ಎಸೀತಾರೆ?
ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ವಾಪಸ್ ಕಳುಹಿಸದಿರಲಿ ಅಂತ!
ಕೆ.ಎಂ. ಲಿಂಗರಾಜು, 9916021365
ಚಹ ಮಾರುತ್ತಿದ್ದವನ ಮೇಲೇಕೆ ಅಮೂ, ಗಿಕಾ ಮತ್ತು ಮರುಳರ ತಂಡ ಈ ಪರಿ ದ್ವೇಷ ಸಾಧಿಸುತ್ತಿದೆ?
ಚಹಾ ಮಾರುತ್ತಿದ್ದವರು ಅಧಿಕಾರಕ್ಕೆ ಬಂದಿದ್ದಾರಲ್ಲ ಎಂಬುದೇ ಸಮಸ್ಯೆ!
ಬಾಣಭಟ್ಟ