ಆರ್.ಬಿ.ಸಿ. ಕೆ.ಆರ್. ನಗರ
ದಾನ ಕೊಟ್ಟಿದ್ದನ್ನು ಮರೀಬೇಕು, ಸಾಲ ಕೊಟ್ಟಿದ್ದನ್ನು ಬರೀಬೇಕು ಅಂತ ತಿಳಿದವರು ಹೇಳುತ್ತಾರೆ. ರಾಜಕಾರಣಿಗಳು ವೋಟ್ ಕೊಟ್ಟವರನ್ನೇ ಮರೀತಾರಲ್ಲಾ?
ಅದಕ್ಕೇ ಅದನ್ನು ಮತ'ದಾನ' ಅಂತ ಕರೆಯೋದು!
ಜಯಶ್ರೀ ಅಬ್ಬಿಗೇರಿ, ಬೆಳಗಾವಿ, 9449234142
ಗಂಡನ್ನು ತನ್ನ ಬಲೆಯಲ್ಲಿ ಬೀಳಿಸಿಕೊಂಡರೂ ಹೆಣ್ಣನ್ನು ಅಬಲೆ ಎನ್ನುತ್ತಾರಲ್ಲ ಯಾಕೆ?
ಬಲೆಗೆ ಬೀಳಿಸಿಕೊಂಡ ನಂತರ ಅನುಭವಿಸುವವಳು ಅವಳೇ ಆಗಿರುವುದರಿಂದ.
ಚಿರಪ್ರಭ ನಂಜನಗೂಡು, 8553793107
ಭಾರತ 21ನೇ ಶತಮಾನದ ಸೌದಿ ಅರೇಬಿಯಾ ಅಂತಾರಲ್ಲಾ ಹೇಗೆ?
ನೀರಿನ ಕೊರತೆ ಕಾಣಿಸಿಕೊಳ್ಳುವುದರಿಂದ!
ಕೆ.ಎಂ. ಲಿಂಗರಾಜು, 9916021365
ಆಧಾರ್ ದಂಧೆಯಿಂದ ದೇಶಕ್ಕೆ, ದೇಶದ ಜನತೆಗೆ ಉಂಟಾಗಿರುವ ನಷ್ಟಕ್ಕೆ ಯಾರು ಹೊಣೆ?
ಅವರನ್ನು ಆರಿಸಿದ ನಾವೇ ಹೊಣೆ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ನದಿಯು ಸಾಗರದ ಮೇಲೆ ಮುನಿಸಿಕೊಂಡರೆ ಮತ್ತೆ ಹರಿದು ಸೇರುವುದೆಲ್ಲಿಗೆ?
ನದಿ ತಿರುವಿಗೆ ನನ್ನ ಹೆಸರೂ ಸೇರಿಸಿ ಅಂತ ಸರ್ಕಾರಕ್ಕೆ ಮನವಿ ಸಲ್ಲಿಸಬೇಕಾಗುತ್ತದೆ!
ಬಾಣಭಟ್ಟ