ಸೈನ್ಯಾಧಿಕಾರಿಗೆ ಸಡ್ಡು ಹೊಡೆದ ಬಾಲಕ

Updated on: 

ಆಂಡ್ರ್ಯೂ ಜಾಕ್ಸನ್ ಅಮೆರಿಕದ ಏಳನೇ ಅಧ್ಯಕ್ಷರಾಗಿ 1829ರಲ್ಲಿ ಚುನಾಯಿತರಾಗಿ ಎಂಟು ವರ್ಷಗಳ ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ಅಮೆರಿಕದ ಶಕ್ತಿಯನ್ನು ಬಲಪಡಿಸಿದ್ದೇ ಅಲ್ಲದೆ,
ಆಡಳಿತಕ್ಕೆ ಹೊಸರೂಪ ಕೊಟ್ಟ ಪ್ರಜ್ಞಾವಂತ. ಆತ ಚಿಕ್ಕಂದಿನಿಂದಲೂ ದೇಶದ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದವನು. ಬಾಲ್ಯದಲ್ಲಿ ದಕ್ಷಿಣ ಕರೋಲಿನಾದಲ್ಲಿ ತಮ್ಮ ತಂದೆತಾಯಿಯರೊಡನೆ ವಾಸವಾಗಿದ್ದಾಗ ನಡೆದ ಒಂದು ಘಟನೆ ಜಾಕ್ಸನ್‌ನ ಉತ್ಕಟ  ದೇಶಪ್ರೇಮವನ್ನು ತೋರಿಸುತ್ತದೆ. ಜಾಕ್ಸನ್‌ಗೆ ಇನ್ನೂ ಹದಿಮೂರು ವರ್ಷವಾಗಿದ್ದಾಗ ಒಮ್ಮೆ ದಕ್ಷಿಣ ಕರೋಲಿನಾದ ಚಾರ್ಲ್‌ಸ್ಟ್‌ನ್ನನ್ನು ಇಂಗ್ಲೆಂಡ್ ಸೈನ್ಯ ವಶಪಡಿಸಿಕೊಂಡಿತು. ಆಗ ಇಂಗ್ಲಿಷ್ ಯೋಧರಿಗೆ ಕೆಂಪಂಗಿಗಳೆಂದು ಕರೆಯಲಾಗುತ್ತಿತ್ತು. ತಮ್ಮ ಪ್ರದೇಶವನ್ನು ಇಂಗ್ಲಿಷರು ವಶಪಡಿಸಿಕೊಂಡಿದ್ದು ಜಾಕ್ಸನ್‌ಗೆ ಸಹಿಸದಾಯಿತು. ತಾನೂ ಸ್ವಾತಂತ್ರ್ಯಕ್ಕಾಗಿ ಹೋರಾಡಲು ನಿರ್ಧರಿಸಿದ. ತನ್ನ ಕುದುರೆಯನ್ನೇರಿ ಇಂಗ್ಲಿಷರತ್ತ ನುಗ್ಗಿದ. ಆದರೆ ಅವನನ್ನು ಬಂಧಿಸಿ, ಇಂಗ್ಲಿಷ್ ಸೈನ್ಯಾಧಿಕಾರಿಯ ಬಳಿ ಬಂಧಿಯನ್ನಾಗಿ ಒಯ್ಯಲಾಯಿತು. ಅಲ್ಲಿದ್ದ ಸೈನ್ಯಾಧಿಕಾರಿ ಜಾಕ್ಸನ್‌ಗೆ ಅವಮಾನ ಮಾಡಲೆಂದೇ ತನ್ನ ಪಾದರಕ್ಷೆಗಳನ್ನು ಒರೆಸಲು ಆದೇಶಿಸಿದ. ಇದರಿಂದ ಕೆರಳಿದ ಜಾಕ್ಸನ್ ತಾನೊಬ್ಬ ಬಂಧಿತ ಸೈನಿಕನಾಗಿರುವುದರಿಂದ ಗೌರವದಿಂದ ನಡೆಸಿಕೊಳ್ಳಲು ಕೇಳಿಕೊಂಡ. ಆಂಗ್ಲ ಕ್ಯಾಪ್ಟನ್‌ಗೆ ತುಂಬಾ ಸಿಟ್ಟುಬಂತು. ತನ್ನ ಸೊಂಟದಲ್ಲಿದ್ದ ಕತ್ತಿಯನ್ನು ಹೊರಗೆಳೆದು ಕೊಲ್ಲಲು ಮುಂದೆ ನುಗ್ಗಿದ. ಕಿಂಚಿತ್ ಹೆದರಿಕೆಯಿಲ್ಲದೆ ಜಾಕ್ಸನ್ನನೂ ಸಹ ಮುನ್ನುಗ್ಗಿ ತನ್ನ ಮುಷ್ಟಿಯಿಂದ ಕ್ಯಾಪ್ಟನ್‌ನ ಬೆರಳಿನ ಗಿಣ್ಣಿಗೆ ಬಲವಾಗಿ ಹೊಡೆದ. ನೋವಿನಿಂದ ಚೀರಿದ ಅಧಿಕಾರಿಯ ಕ್ಯೆಯಿಂದ ಕತ್ತಿ ಜಾರಿಬಿತ್ತು. ಆಗ ಅಲ್ಲಿದ್ದ ಸೈನಿಕರು ಇವನೊಬ್ಬ ಶೂರ ಬಾಲಕ, ಅವನಿಗೆ ಘಾಸಿಗೊಳಿಸುವುದು ತರವಲ್ಲ ಎಂದು ಸಲಹೆ ನೀಡಿದರು. ಕೊನೆಗೆ ಅವನನ್ನು ಸೆರೆಮನೆಗೆ ತಳ್ಳಲಾಯಿತು. ಕೆಲವೇ ದಿನಗಳಲ್ಲಿ ಚಾರ್ಲಸ್ಟನ್ ನಗರವನ್ನು ಬ್ರಿಟಿಷರು ಅಮೇರಿಕನ್ನರಿಗೆ ಹಸ್ತಾಂತರಿಸಿದಾಗ ಜಾಕ್ಸನ್‌ನ ಬಿಡುಗಡೆಯೂ ಆಯಿತು. ಮುಂದೆ ಜಾಕ್ಸನ್ ಕೀರ್ತಿ ಹೆಚ್ಚಾಗಿ, ಅವನ ಶೌರ್ಯವನ್ನು ಜನ ಕೊಂಡಾಡಿದರು. ಮುಂದೆ ನ್ಯಾಯವಾದಿಯಾಗಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಂಡನು. ನಂತರ ಸೈನ್ಯದ ಜನರಲ್ ಆಗಿ, ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾಗಿ ಇತಿಹಾಸವನ್ನು ಸೃಷ್ಟಿಸಿದ ಕೀರ್ತಿಗೆ ಭಾಜನನಾದ.


- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com