ಮರಿಕೋಲ್ಯ: ಅಜ್ಜಿ, ನಾವು ಕೊನೆವರೆಗೂ ಮನೆಯಲ್ಲಿ ಬರೀ 5 ಜನರಿರ್ತೀವಾ? ನಾನು, ಅಮ್ಮ, ಅಪ್ಪ, ನೀನು ಮತ್ತು ತಂಗಿ?
ಅಜ್ಜಿ: ಇಲ್ಲ ಪುಟ್ಟ, ನಿನ್ನ ಮದುವೆ ಆದ್ಮೇಲೆ 6 ಜನ ಆಗ್ತೀವಿ.
ಮರಿಕೋಲ್ಯ: ಆಮೇಲೆ ತಂಗಿ ಮದವೆ ಆಗುತ್ತೆ. ಅವ್ಳು ಗಂಡನ ಮನೆಗೆ ಹೋದ್ರೆ ಮತ್ತೆ 5 ಜನ ಆಗ್ತೀವಲ್ವಾ?
ಅಜ್ಜಿ: ಇಲ್ಲ ಕೂಸು...ಆಮೇಲೆ ನಿನಗೆ ಮಗು ಆಗುತ್ತೆ. ಆಗ ಮತ್ತೆ 6 ಜನ ಆಗ್ತೀವಿ.
ಮರಿಕೋಲ್ಯ: ಆಮೇಲೆ ನೀನು ಸತ್ತುಹೋಗ್ತೀಯ, ಆಗ ಮತ್ತೆ 5 ಜನ ಆಗ್ತೀವಿ.
ಅಜ್ಜಿ: ಸುಮ್ನೆ ಮಲ್ಕೊಳ್ಳೋ ಪ್ರಾರಬ್ಧವೇ...ಬರೀ ಅಪಶಕುನ ನುಡಿಯುತ್ತೆ ಮುಂಡೇದು...