ನೇರಲಗುಡ್ಡ ಶಿವಕುಮಾರ್, 9480343742
ಕಂಪ್ಯೂಟರ್, ಲ್ಯಾಪ್ಟಾಪ್, ಮೊಬೈಲ್ ಯಂತ್ರಗಳು ಮನುಷ್ಯನ ವಿವೇಕ ನಾಶ ಮಾಡಿವೆಯಂತೆ?
ಈ 'ವಿವೇಕ' ಎಂಬ ಪದಾರ್ಥ ನಾವು ಬಂದಾಗಲೇ ಇರಲಿಲ್ಲ ಅಂತ ಅವು ದೂರುತ್ತಿವೆ!
ಕಾಳೀಹುಂಡಿ ಶಿವಕುಮಾರ್, 9844883581
ಬಡವ ಕದ್ದರೆ ಕಳ್ಳ. ಶ್ರೀಮಂತರು, ಅಧಿಕಾರಸ್ಥರು ಕದ್ದರೆ ಮನೋವ್ಯಾಧಿಯಂತೆ?
ಕಳ್ಳತನಕ್ಕಿಂತ ಉಗ್ರಶಿಕ್ಷೆಯನ್ನು ಈ ಮನೋವ್ಯಾಧಿಗೆ ಕೊಡುವಂತಾದರೆ ಅವರೇ ಕೆಟಗರಿ ಬದಲಿಸುತ್ತಾರೆ.
ಹರಳಹಳ್ಳಿ ಪುಟ್ಟರಾಜು, 9632838088
ಅಮರಪ್ರೇಮಿಗಳು ನಿಜಕ್ಕೂ ಹೇಗಿರುತ್ತಾರೆ?
ಇರುವುದಿಲ್ಲ. ಅವರು ಸತ್ತ ನಂತರವಷ್ಟೇ ಅಮರರು!
ಡಬ್ಲ್ಯು. ಕೆ. ವೆಂಕಟೇಶಮೂರ್ತಿ, ಬೆಂಗಳೂರು
ಈಗೀಗ ಮದುವೆಗೆ ಮುಂಚೆಯೇ ಆರತಕ್ಷತೆ ಕಾರ್ಯಕ್ರಮ ಮುಗಿಸಿಬಿಡುತ್ತಾರಲ್ಲ?
ಈಗೀಗ ಮದುವೆಗೆ ಮುಂಚೆ ಏನೇನಲ್ಲ ಮುಗಿದಿರುತ್ತೆ, ಇದೇನು ಮಹಾ!
ಎ. ಎಚ್. ಪ್ರಕಾಶ್ಕುಮಾರ್, 9886016328
ಕುರಿ ಕೋಳಿಯನ್ನು ಸೋಮವಾರ, ಶನಿವಾರ ತಿನ್ನಬಾರದು ಅಂತಾರಲ್ಲ ಏಕೆ?
ಕುರಿ-ಕೋಳಿಗಳ ಕಾಳಜಿಯಂತೂ ಅಲ್ಲ. ತಿನ್ನುವವರ ಆರೋಗ್ಯದ ದೃಷ್ಟಿಯಿಂದ ಬಿಡುವು.
ಬಾಣಭಟ್ಟ