ವಿ. ಹೇಮಂತಕುಮಾರ, ಬೆಂಗಳೂರು, 9035992900
ಹುಡುಗಿಯೊಬ್ಬಳು ನನ್ನ ಕೈಲಿ ವಾಚ್ ಇಲ್ಲದ್ದನ್ನು ಕಂಡೂ ಟೈಮ್ ಎಷ್ಟು ಎಂದು ಕೇಳುತ್ತಾಳಲ್ಲ?
ಟೈಮ್ ಚೆನ್ನಾಗಿದ್ರೆ ಕೈಲಿ ವಾಚು ಬೇಕಿಲ್ಲ!
ಡಬ್ಲ್ಯು.ಕೆ. ವೆಂಕಟೇಶಮೂರ್ತಿ, ಭೂಪಸಂದ್ರ, ಬೆಂಗಳೂರು
ಪರೀಕ್ಷಾ ಜ್ವರಕ್ಕೂ ಚುನಾವಣೆ ಜ್ವರಕ್ಕೂ ಏನು ವ್ಯತ್ಯಾಸ?
ಒಂದು ಮಕ್ಕಳಿಗೆ ಬರುತ್ತದೆ, ಇನ್ನೊಂದು ದೊಡ್ಡವರಿಗೆ!
ಬರ್ಕಲಿ ರಮೇಶ, ಕಿರಗಂದೂರು, ಮಂಡ್ಯ, 9008741348
ಹೆಣ್ಣು ಕ್ಷಮಯಾ ಧರಿತ್ರಿ. ಗಂಡು?
ಸದಾ ಕ್ಷಮೆ ಬೇಡುವ ದರಿದ್ರಿ!
ನೇತ್ರಾ ಆನೆಕೆರೆ ಬೀದಿ, 8970452188
ಕುಡಿದವರು ಸಾಮಾನ್ಯವಾಗಿ ಸತ್ಯವನ್ನೇ ಹೇಳುತ್ತಾರೆ ಯಾಕೆ?
ಒಳಗಿರುವ ಪರಮಾತ್ಮ ಮಾತನಾಡಿಸುತ್ತಿರುವುದರಿಂದ!
ಎ.ಎಚ್. ಪ್ರಕಾಶಕುಮಾರ, 9886016328
ಯುಗಾದಿ ಹಬ್ಬದಂದು ಚಂದ್ರನೋಡುವುದು ಓಕೆ ಗಣಪತಿ ಹಬ್ಬದಂದು ನೋಡಬಾರದು ಯಾಕೆ?
ಎಲ್ಲ ಹಬ್ಬದಂದೂ ಚಂದ್ರನನ್ನೇ ನೋಡಿದರೆ ಸೂರ್ಯ ಬೇಜಾರ್ ಮಾಡ್ಕೋತಾನೆ ಅಂತ!
ಬಾಣಭಟ್ಟ