ಬೆಂಗಳೂರು

Updated on

ಬೆಂಗಳೂರು
    ಸಹನೆಯ ಸಹನೆಯನ್ನೇ ಪರೀಕ್ಷಿಸುವ ಅಸಹನೀಯಗಳ ಆಗರ ಈ ನಗರ
    ಜನ ಹಾಗೂ ವಾಹನ ದಟ್ಟಣೆಗಳ ಪಟ್ಟಣ
    ನುಗ್ಗಿ ನಡೆ ಮುಂದೆ ಎಂಬ ಮಾತನ್ನು ಅಕ್ಷರಶಃ ಪಾಲಿಸುವವರ ಕೇಂದ್ರ
    ಪದವೀಧರರೆಲ್ಲರೂ ಮೊದಲ ಹೆಜ್ಜೆಯೂರುವ ಧರಣಿ
    ವಿಳಾಸವಿಲ್ಲದವರು ಮತ್ತು ವಿಳಾಸ ಹುಡುಕುವವರು ಮತ್ತು ವಿಳಾಸ ಬದಲಿಸುವವರು ಇವರಷ್ಟೇ ಇರುವ ಜಾಗ
    ಹಳ್ಳಿಗಳ ಹರೆಯವನ್ನು ಕುಡಿದು ವೃದ್ಧಾಪ್ಯಕ್ಕೆ ನೂಕುತ್ತಿರುವ ಮಹಾವ್ಯಾಧಿ
    ತಂಗಳು ತಿನ್ನುವವರೇ ಜಾಸ್ತಿಯಿರುವುದರಿಂದ ಇದನ್ನು 'ತಂಗಳೂರು' ಎಂದೂ ಕರೆಯಬಹುದು
    ಮಾಲುಗಳಲ್ಲಿ ಮಾತ್ರ ಒಳ್ಳೆಯ ಮಾಲು ಸಿಗುತ್ತದೆಂದು ನಂಬಿರುವವರನ್ನು ಕಮಾಲು ಮಾಡುವ ಊರು
    ಫಾಸ್ಟ್‌ಫುಡ್ ತಿಂದು ಫ್ಯಾಟ್ ಹೆಚ್ಚಿಸಿಕೊಂಡು ಅದನ್ನು ಕರಗಿಸಲೆಂದು ಡಯಟ್ ಮಾಡುವವರ ಕೂಟ
    ದಿನದಿಂದ ದಿನಕ್ಕೆ ವ್ಯಾಪಕವಾಗಿ ಹಬ್ಬುತ್ತಿರುವ ಐ.ಟಿ. ಹಬ್ಬು
    ಕಬ್ಬಿಗರನ್ನೂ ಪಬ್ಬಿಗರನ್ನಾಗಿಸುವ ಶಕ್ತಿ ಇರುವ ನಗರ

-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com