ಲಿವ್‌ಸ್ಟ್ರಾಂಗ್ ಎನ್ನುವ ಆರ್ಮ್‌ಸ್ಟ್ರಾಂಗ್

Updated on

ಸಾಮಾನ್ಯವಾಗಿ ರೋಗ ತಗುಲಿದ ವ್ಯಕ್ತಿಗೆ ಜೀವನದಲ್ಲಿ ಆಸಕ್ತಿಯೇ ಇರುವುದಿಲ್ಲ. ಅದರಲ್ಲೂ ಕ್ಯಾನ್ಸರ್‌ನಂತಹ ರೋಗವಿದ್ದರಂತೂ ಆ ಕುರಿತು ಯೋಚಿಸಿ, ಯೋಚಿಸಿ ತನ್ನ ಜೀವಕ್ಕೇ ಅಪಾಯ ತಂದುಕೊಳ್ಳುತ್ತಾನೆ. ಆದರೆ ಅಲ್ಲೊಬ್ಬ ಇಲ್ಲೊಬ್ಬರು ಅದನ್ನೇ ಸವಾಲಾಗಿ ಸ್ವೀಕರಿಸಿ, ಹಿರಿಯ ಸಾಧನೆಗಳನ್ನು ಮಾಡುತ್ತಾರೆ. ಅಂತಹವರಲ್ಲಿ ಎದ್ದು ಕಾಣುವ ಪ್ರತಿಭೆ ಲಾನ್ಸ್ ಎಡ್ವರ್ಡ್ ಆರ್ಮ್‌ಸ್ಟ್ರಾಂಗ್. ಅವನು ಅಮೆರಿಕದ ಸೈಕ್ಲಿಂಗ್ ಚಾಂಪಿಯನ್. 1999 ರಿಂದ 2005ರವರೆಗೆ ಟೂರ್-ಡಿ-ಫ್ರಾನ್ಸ್‌ನ 21 ದಿನಗಳ 3500 ಕಿ.ಮೀ.ದೂರ ಕ್ರಮಿಸುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಏಳು ವರ್ಷಗಳೂ ಚಾಂಪಿಯನ್ ಆದವನು. ಮೂರನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಛಲಬಿಡದೆ ಸೈಕ್ಲಿಂಗ್‌ನಲ್ಲಿ ಅನೇಕ ಮೈಲುಗಲ್ಲನ್ನು ಸ್ಥಾಪಿಸಿದ್ದಾನೆ. ಕ್ಯಾನ್ಸರ್ ಇದ್ದರೂ ಸಹ 1993ರಲ್ಲಿ ವಿಶ್ವ ಚಾಂಪಿಯನ್ ಆಗಿ ಮೆರೆದ. ಬಲವಾದ ಆತ್ಮವಿಶ್ವಾಸದಿಂದ ತನಗೆ ಅಂಟಿಕೊಂಡಿದ್ದ ಕ್ಯಾನ್ಸರ್ ರೋಗದಿಂದಲೂ ಮುಕ್ತನಾದ. ಆರ್ಮ್‌ಸ್ಟ್ರಾಂಗ್ ಎಂದಿಗೂ ತನಗೆ ಕ್ಯಾನ್ಸರ್ ತಗುಲಿದೆಯೆಂದು ಯೋಚಿಸಲಿಲ್ಲ. ಎಲ್ಲ ರೋಗಗಳಂತೆ ಅದೂ ಒಂದು ಖಾಯಿಲೆಯೆಂದು ಬಗೆದು ಅದರ ನಿವಾರಣೆ ಮಾಡಿಕೊಂಡ. ತನ್ನ ಗುರಿಯನ್ನು ತಲುಪಿ ದೇಶಕ್ಕೇ ಕೀರ್ತಿ ತಂದ. ಲಿವ್ ಸ್ಟ್ರಾಂಗ್ ಫೌಂಡೇಷನ್ ಸ್ಥಾಪಿಸಿ, ಅದರ ಮೂಲಕ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಿಗೆ ನೆರವಾಗುತ್ತಿದ್ದಾನೆ. ಅನೇಕ ಅಂತಾರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಯಶಸ್ಸು ಗಳಿಸಿರುವ ಆತ ಇಂದಿಗೂ ತನ್ನ ಪ್ರಯತ್ನ ಬಿಡದ ಛಲಗಾರ. ಆತನಿಗಿದ್ದ ರೋಗ, ಅನುಭವಿಸಿದ ನೋವುಗಳ ಬಗ್ಗೆ ಪ್ರಶ್ನಿಸಿದರೆ ಆತ ಹೇಳುವುದಿಷ್ಟೆ, "ನಾನು ನೋವು, ಸಂಕಟ ಮತ್ತು ತ್ಯಾಗ ಎಂಬ ಮೂವರನ್ನು ಭೇಟಿಯಾದೆ. ನಮ್ಮನ್ನೀಗ ಬೇರ್ಪಡಿಸಲಾಗದು. ಏಕೆಂದರೆ, ನಾವೀಗ ಉತ್ತಮ ಸ್ನೇಹಿತರು." ಸೋಲಿಗೆ ಅಂಜದೆ ಜೀವನದಲ್ಲಿ ಮುನ್ನಡೆದರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂಬುದು ಆರ್ಮ್‌ಸ್ಟ್ರಾಂಗ್‌ನ ಧ್ಯೇಯವಾಕ್ಯವಾಗಿದೆ.   

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com