ಬೆಂಗಳೂರು

ಬೆಂಗಳೂರು
    ಇಲ್ಲಿ ಹಣದ ವಿನಾ ತೃಣಮಪಿ ನ ಚಲತಿ
    ಎಲ್ಲ ಭಾಷೆಗಳಿಗೂ ಇಲ್ಲಿದೆ ಪುರಸ್ಕಾರ, ಅದಕ್ಕೇ ಯಾರಿಗೂ ಇಲ್ಲ ಕನ್ನಡದ ಬಗ್ಗೆ ದರಕಾರ
    ಕೂತು ಉಂಡರೆ ಕುಡಿಕೆ ಹೊನ್ನು ಸಾಲದು ಎಂದು ತಿಳಿದು ನಿಂತೇ ಉಣ್ಣುವ ಜೀವನಶೈಲಿ ಇಲ್ಲಿಯದು
    'ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ' ಎಂಬ ಮಾತನ್ನು ವಿಧಾನಸೌಧದ ಎದುರಿನ ಕಬ್ಬನ್ ಪಾರ್ಕಲ್ಲಿ ನೆನಪಿಸಿಕೊಳ್ಳಬಹುದು
    ಐದು ದಿನ ಓಡಾಟ, ಹೋರಾಟ. ಎರಡು ದಿನ ಓಲಾಟ, ತೂರಾಟ
    ಬಡವರನ್ನು ಜೀವಂತ ಸುಡುವ ಸ್ಮಶಾನ
    ಬೆಂಗಳೂರಿನ ರಸ್ತೆಗಳ ಮೇಲೆ ವೇಗವಾಗಿ, ಸುರಕ್ಷಿತವಾಗಿ. ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳದೇ ಸಂಚರಿಸುವ ವಾಹನವೆಂದರೆ ಅದು ವಿಮಾನ ಮಾತ್ರ
    ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವವರಿಗಿಂತ ಪಾರ್ಕನ್ನು ಪ್ರದಕ್ಷಿಣೆ ಹಾಕುವವರೇ ಹೆಚ್ಚು
    ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮತ್ತು ಕೊಳೆಯುತ್ತಿರುವ ನಗರ
    ಇಲ್ಲಿ ತಿನ್ನಲೂ ದುಡ್ಡು, ತಿಂದಿದ್ದು ವಿಸರ್ಜಿಸಲೂ ದುಡ್ಡು
    'ಹಗಲೂ ರಾತ್ರಿ ದುಡಿ, ಕೊನೆಯ ಎರಡು ದಿನ ಕುಡಿ' ಇದೇ ಇಲ್ಲಿಯ ಧ್ಯೇಯವಾಕ್ಯ

-ವಿಶ್ವನಾಥ ಸುಂಕಸಾಳ
vishwasunkasal@yahoo.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com