ಪಕ್ಕದ ಮನೆ

ಪಕ್ಕದ ಮನೆ
= ಇದು ಇರುವವರೆಗೆ ಹಲವರಿಗೆ ಸುಖ ಶಾಂತಿ ಇಲ್ಲ
= ಹೆಂಡತಿಯ ಹೊಸ ಹೊಸ ಬಯಕೆಗಳು ಹುಟ್ಟುವುದರ ಮೂಲ ಸ್ರೋತ
= ನಮ್ಮ ಮನೆಗೆ ತರಿಸುವ ಪತ್ರಿಕೆಗಳ ನಿಷ್ಠಾವಂತ ಓದುಗರಿರುವ ಮನೆ
= ನಮ್ಮ ಮನೆಯ ಅಭಿವೃದ್ಧಿಗೆ/ ಅಧಃಪತನಕ್ಕೆ ಇದರ ಕೊಡುಗೆ ಅಧಿಕ
= ಕೆಲವರು ಎಲ್ಲ ಸಹಾಯಕ್ಕೂ ಪಕ್ಕಾಗುವ ಮನೆ
ಅಕ್ಕದ ಮನೆಗೆ ಅತಿಥಿಗಳು ಬಂದರೆ ಪಕ್ಕದ ಮನೆಯವರಿಗೆ ಚಹಾಪುಡಿ ಮತ್ತು ಸಕ್ಕರೆ ಖರ್ಚು
= ಪಕ್ಕದ ಮನೆಯವರನ್ನು ಚೆನ್ನಾಗಿಟ್ಟುಕೊಂಡರೆ ನಮಗೇ ಕ್ಷೇಮ. ಅನ್ಯಥಾ ಸುಖ ಸಮೃದ್ಧಿಗೆ ಕ್ಷಾಮ
= ಕೆಲವೊಮ್ಮೆ 'ನೆರೆ', ಇನ್ನು ಕೆಲವೊಮ್ಮೆ 'ಹೊರೆ'
= ಕೆಲವೊಮ್ಮೆ ಶತ್ರುಮನೆ. ಇನ್ನು ಕೆಲವೊಮ್ಮೆ ಮಿತ್ರರಂತೆ ನಟಿಸುವವರು ಇರುವ ಮನೆ
= ಮನೆಯೇ ಮಂತ್ರಾಲಯ, ನೆರೆಮನೆಯೇ ಮಂಥರಾ ಆಲಯ
= ಯಾವ ಅಂಗಡಿಯಲ್ಲಿ ಯಾವ ಆಫರ್ ಬಂದಿದೆ ಎಂದು ತಿಳಿಸುವ ಸುದ್ದಿಮನೆ
= ಇವರನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಮನೆಯ ವಸ್ತುಗಳು ಸುರಕ್ಷಿತವಾಗಿರಬೇಕೆಂದರೆ.....

-ವಿಶ್ವನಾಥ ಸುಂಕಸಾಳ
vishwasunkasal@yahoo.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com