ದುರ್ಬುದ್ಧಿ

Updated on: 

   ಹುಡುಗಿಯರನ್ನು ಕಂಡಾಗ ಬಾಯ್ತೆರೆದು ದುರುದುರು ದಿಟ್ಟಿಸುವ ಗಂಡಸು ಬುದ್ಧಿ
    ಹತ್ತಿರದ ನೆಂಟರು ಹತ್ತಿರದಲ್ಲೇ ಕಂಡಾಗಲೂ ದೂರದವರೆಂಬಂತೆ ನಟಿಸಿ ದೂರವಿಡುವ ಬುದ್ಧಿ
    ಮಾಲ್ಗಳಿಗೆ ಹೋಗಿ ಮಾತನಾಡದೇ ಸಾವಿರಾರು ವ್ಯಯಿಸುವ ಜನ, ತರಕಾರಿಯವನೊಡನೆ ದರ ಹೆಚ್ಚಾಯಿತೆಂದು ದೂರುವ ಬುದ್ಧಿ
    ಪಕ್ಕದ ಮನೆಯವನ ಏಳಿಗೆಯನ್ನು ತಡೆಯಲು ತನ್ನ ಕುತಂತ್ರದ ಈಳಿಗೆಯನ್ನು ತಯಾರಿಸುವುದು
    ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಅವನದ್ದು ಎರಡೂ ಕಣ್ಣು ಹೋಗಲಿ ಎಂಬ ಅಸಹನೆಯ ಬುದ್ಧಿ
    ತನ್ನಲ್ಲಿರುವ ಹುಳುಕನ್ನು ಮರೆಮಾಚಿಕೊಳ್ಳಲು ಬೇರೆಯವರ ತಟ್ಟೆಗೆ ಹುಳುಗಳನ್ನು ಎಸೆಯುವ ಹುಳುಕು ಬುದ್ಧಿ
    ವಾಸ್ತುವಿನ ಹೆಸರಲ್ಲಿ ಗೋಡೆ ಒಡೆದು ವಿಧಾನಸೌಧದ ಅಂದವನ್ನು ಕುಲಗೆಡಿಸುವ ಮೂಢ ಬುದ್ಧಿ
    ಪ್ರತಿಯೊಂದನ್ನೂ ಕುತರ್ಕದ ವಾದದ ಮೂಲಕ ಖಂಡಿಸುವ  ಪಂಡಿತಮಾನಿಗಳ ಪಾಖಂಡ ಬುದ್ಧಿ
    ತನ್ನನ್ನು ತಾನೇ ವಿದ್ವಾಂಸನೆಂದು ಗರ್ವಪಡುವ, ಇನ್ನೊಬ್ಬ ವಿದ್ವಾಂಸನನ್ನು ಮೇಲಕ್ಕೆ ಬಾರದಂತೆ ತಡೆವ ವಿಧ್ವಂಸಕ ಬುದ್ಧಿ
     ಜಾತಿ ಜಾತಿಗಳ ನಡುವೆ ಜಗಳದ ಬೆಂಕಿ ಹೊತ್ತಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ನಿರ್ಬೀಜ ರಾಜಕಾರಣಿಗಳ ಬುದ್ಧಿ


-ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com