ಮಾನವ ಕಂಡುಹಿಡಿದ ಅತಿ ಚಲನಶೀಲ ವಸ್ತು
ಏನಾಗಲಿ ಮುಂದೆ ಸಾಗು ನೀ....ಎಂಬ ಹಾಡಿನ ಮೂಲ ಪ್ರೇರಕ
ಕಲ್ಲಿರಲಿ ಮುಳ್ಳಿರಲಿ ಸೋಗಿಲ್ಲದೇ ಸಾಗುವಂಥದ್ದು
ತನ್ನ ಸುತ್ತ ತಾನು ಸುತ್ತುತ್ತಾ ಪ್ರಪಂಚವನ್ನೇ ಸುತ್ತುವಂಥದ್ದು
ಪ್ರಗತಿಯ ಸಂಕೇತ
ಪಂಕ್ಚರ್ ಆದರೆ ಅಧೋಗತಿಯ ಸಂಕೇತ
ಭ್ರಮಣಶೀಲ ವಸ್ತು
ದೇಶ ಸುತ್ತು ಎನ್ನುವ ಮಾತಿಗೆ ಅನ್ವರ್ಥಕ
ರೋಡ್ ರೋಮಿಯೋ
ಇದು ಸಾಗಿದ್ದೇ ದಾರಿ
ಅಡ್ಡದಾರಿ ಹಿಡಿದರೆ ಮಾತ್ರ ದಾರಿ ಕಾಣದೇ ಹೋಗಬೇಕಾಗುತ್ತದೆ
ಮುಂದೆ ಬಂದರೆ ಹಾಯುವ ಸ್ವಭಾವದ್ದು
ಗಲ್ಲಿ ಗಲ್ಲಿ ಸುತ್ತುವ, ಗಾಳಿಯನ್ನೇ ತಿಂದು ಬದುಕುವ ಗಾಲಿ
ಕಾಲವೂ ಒಂದು ಚಕ್ರ. ಎಲ್ಲರೂ ಒಮ್ಮೆ ಈ ಚಕ್ರದ ಅಡಿಗೆ ಸಿಲುಕಲೇಬೇಕು
ಚಕ್ರಗಳನ್ನು ಮಾರುವ ಟೈರ್ ಅಂಗಡಿಯ ಮಾಲೀಕನನ್ನು ಚಕ್ರವರ್ತಿ ಎನ್ನಬಹುದು
-ವಿಶ್ವನಾಥ ಸುಂಕಸಾಳ