ರಕ್ತ

Updated on: 

   ನಮ್ಮನ್ನು ಕಂಡರೆ ಆಗದವರ ಆಹಾರ
    ಬಾಸ್ ಮತ್ತು ಹೆಂಡತಿಗೆ ಇದೆಂದರೆ ತುಂಬ ರುಚಿ
    ಎಲ್ಲರ ರಕ್ತವೂ ಕೆಂಪು ಬಣ್ಣದ್ದೇ ಆಗಿದ್ದರೂ ಅದರ ಗುಣ ಮಾತ್ರ ಬೇರೆ ಬೇರೆ
    ವಂಶದ ಗುಣಗಳ ವಾಹಕ
    ರಕ್ತ ಬೀಜಾಸುರನ ಶಕ್ತಿ
    ಹೃದಯದಲ್ಲಿ ಹುಟ್ಟುವಂಥದ್ದು. ವಿಶಾಲ ಹೃದಯಿಯಾಗಿದ್ದರೆ ಮತ್ತೊಬ್ಬನ ಹೃದಯವನ್ನೂ ಸೇರುವಂಥದ್ದು
    ರಕ್ತ ಬದಲು ಮಾಡಿದರೂ ರಕ್ತ ಗುಣವನ್ನು ಬದಲಾಯಿಸಲಾಗದು
    ಒಂದೊಂದು ಹನಿಯಲ್ಲೂ ಜೀವವಿದೆ
    ಸೊಳ್ಳೆಯ ರುಚಿಕರ ಪೇಯ
    ಹರೆಯದಲ್ಲಿ ರಕ್ತ ಕುದಿಯುತ್ತದೆ. ಮುದುಕರಿಗೆ ರಕ್ತ ಹೆಪ್ಪುಗಟ್ಟುತ್ತದೆ
    ಬ್ಲಡಿ ಫೂಲ್‌ಗಳಲ್ಲೂ ಇರುವ ಬ್ಲಡ್
    ಇದರ ಸಂಚಾರ ಸರಿಯಿದ್ದರೆ ಮಾತ್ರ ವಿಚಾರವೂ ಸರಿಯಿರುತ್ತದೆ
    ಕೊಲೆಗಾರರಲ್ಲೂ ರಕ್ತವಿರುತ್ತದೆ. ಆದರೆ ಅವರಿಗೆ ಹೃದಯವೇ ಇರುವುದಿಲ್ಲ
    ಬಾಡಿ ಒಡೆದಾಗ ಒತ್ತರಿಸಿ ಬರುವ ನೆತ್ತರು
     ಬಿಳಿರಕ್ತದ ಕಣ ಕಡಿಮೆಯಿದ್ದರೆ, ದೇಹ ಬೇಗನೇ ಬಿಳುಚುವುದು
    ಕೆಲವರಿಗೆ ರಕ್ತದಾನದ ಹೆಸರಲ್ಲಿ ಫೋಟೋ ತೆಗೆಸಿಕೊಳ್ಳಲೊಂದು ನೆಪ
    ನಮ್ಮ ಜೀವ ಕೊಡಲಾಗದಿದ್ದರೂ ರಕ್ತ ಕೊಡುವ ಮೂಲಕ ಜೀವವನ್ನು ಉಳಿಸಬಹುದು


-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com