ಮೂಢನೂ ಪ್ರಯೋಜನವಿಲ್ಲದ್ದನ್ನು ಮಾಡಲಾರ ಮತ್ತು ಪ್ರಯೋಜನವಿಲ್ಲದ್ದನ್ನು ಮಾಡುವವ ಮೂಢನೇ
ಪ್ರಯೋಜನವಿಲ್ಲದ್ದರಲ್ಲಿ ಯಾವ ಜನ ಉದ್ಯುಕ್ತರಾಗುತ್ತಾರೆ?
ಲಾಸ್ ಆಗಬಾರದೆಂದು ಮಾಡಲ್ಪಡುವ ಯೂಸ್
ಬೇಕೆನಿಸಿದ್ದನ್ನು ಪಡೆಯುವುದೇ ಎಲ್ಲ ಕಾರ್ಯಗಳ ಮುಖ್ಯ ಪ್ರಯೋಜನ
ಪ್ರಾಯ ಇದ್ದರೇನು? ಪ್ರಯೋಜನ ಕಾಯ ಗಟ್ಟಿಯಿರದಿದ್ದರೆ!
ತೀರಾ ಲೋಭವಲ್ಲದಿದ್ದರೂ ಲಾಭವಂತೂ ಹೌದು
ಇದರ ವ್ಯಾಖ್ಯೆ ಪ್ರತಿಯೊಬ್ಬನಿಗೂ ಭಿನ್ನವೇ
ಕಾರ್ಯಾರಂಭದಲ್ಲಿ ಇಟ್ಟುಕೊಳ್ಳಬೇಕಾದ ನಿರೀಕ್ಷೆ
ಕಾರ್ಯಾಂತದಲ್ಲಿ ದೊರೆಯುವ ಫಲಿತಾಂಶ
ಲಾಬಿ ಮಾಡುವ ಹಿಂದಿರುವ ಲಾಭ
ಪ್ರಯೋಜನ ಇರದೇ ಯಾವ ಜನರೂ ಪ್ರವರ್ತಿಸಲಾರರು
ಸ್ವಂತಕ್ಕೆ ಪ್ರಯೋಜನವಾಗದ ಆದರೆ ಪರರ ಪ್ರಯೋಜನಕ್ಕಾಗಿ ಮಾಡುವ ಕಾರ್ಯಗಳನ್ನು ಪರೋಪಕಾರ ಎನ್ನಬಹುದು
ಸಮಾಜಕ್ಕೆ ಪ್ರಯೋಜನವಾಗಲೆಂಬ ಹೆಸರಿನಲ್ಲಿ ತಾನು ಪ್ರಯೋಜನ ತೆಗೆದುಕೊಳ್ಳಲು ಮಾಡುವ ಎಲ್ಲ ಯೋಜನೆಗಳೂ ಸಮಾಜ ಸೇವೆ ಎಂದು ಕರೆಸಿಕೊಳ್ಳುತ್ತವೆ
ಸರಕಾರದ ಯೋಜನೆಗಳಿಗೆ ಪ್ರಯೋಜನದ ಉದ್ದೇಶವಿದ್ದರೂ ಫಲಿತದಲ್ಲಿ ಅದು ನಿಷ್ಪ್ರಯೋಜನವೇ ಆಗಿಬಿಡಬಹುದು