ವಿರೋಧಾಭಾಸದ ತಮ್ಮ
ಈರುಳ್ಳಿ ರೇಟು ಡಾಲರ್ಗಿಂತ ಮೇಲೆ ಹೋದರೂ ಬೆಳೆಗಾರನ ಸ್ಥಿತಿ ಮಾತ್ರ ಬದಲಾಗದ್ದು ವಿಪರ್ಯಾಸ
ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದರೂ ಜಾಮೀನಿನ ಮೇಲೆ ಬಿಡಿಸಿಕೊಂಡು ಚುನಾವಣೆಯಲ್ಲಿ ಗೆಲ್ಲುತ್ತಾರಲ್ಲ ಅದು ವಿಪರ್ಯಾಸ
ನಮ್ಮ ಮತದಿಂದಲೇ ಆಯ್ಕೆಯಾಗಿ ಹೋದವರನ್ನು ನಾವು ಭೇಟಿಯಾಗಬೇಕೆಂದರೆ ಅನುಮತಿ ಪಡೆಯಬೇಕಲ್ಲಾ ಅದು ವಿಪರ್ಯಾಸ
ಮೂಢನಂಬಿಕೆಯ ವಿರುದ್ಧ ಮಾತನಾಡುವವರು ತಮ್ಮ "ಬೆನ್ನ ಹಿನ್"ದೆ ಆಗುವ ಇತರ ಧರ್ಮಗಳ ಮೌಢ್ಯಾಚರಣೆಗೆ ಬಾಯಿ ಮುಚ್ಚಿಕೊಂಡು ಕೂತಿರುವುದೂ ವಿಪರ್ಯಾಸವೇ
ಮೂರ್ತಿ ಪೂಜೆಯನ್ನು ವಿರೋಧಿಸುವವರು ಕುತ್ತಿಗೆಗೆ ಮೂರ್ತಿಯನ್ನು ತೂಗು ಹಾಕಿಕೊಳ್ಳುತ್ತಾರಲ್ಲ ಅದೂ ವಿಪರ್ಯಾಸವೇ
ಕಾವಿ ತೊಟ್ಟ ಸಾಧುಗಳೆಲ್ಲಾ ಸಮಾಜದ ಶತ್ರು ಎನ್ನುವ ಮಿಡಿ ಕಾಮಿಡಿ, ಅದನ್ನು ಹೇಳುವಾಗಲೂ ಕಾವಿ ತೊಟ್ಟಿರುತ್ತಾರಲ್ಲಾ..ಅದು ವಿಪರ್ಯಾಸ
ಹಿಂದೂಗಳನ್ನು ಮಾತ್ರ ಟೀಕಿಸುತ್ತಾ ಬುದ್ಧಿಜೀವಿಗಳೆನಿಸಿಕೊಂಡವರ ಬೊಗಳೆಗಳನ್ನು ಕೇಳಿಸಿಕೊಂಡೂ ಸುಮ್ಮನಿರುತ್ತೀವಲ್ಲ ಅದು ವಿಪರ್ಯಾಸ
ವಿದೇಶೀಯರೆಂಬ ಕಾರಣಕ್ಕೆ ಆಂಗ್ಲರನ್ನು ವಿರೋಧಿಸಿದ ನಾವು ವಿದೇಶೀಯರ ಅಧೀನದಲ್ಲೇ ಇದ್ದೀವಲ್ಲಾ ಈಗಲೂ ಅದೇ ವಿಪರ್ಯಾಸ
ಗರೀಬಿ ಹಟಾವೋ ಎನ್ನುತ್ತಾ ಬಡವರನ್ನೇ ನಿರ್ಮೂಲನೆ ಮಾಡುತ್ತಾರಲ್ಲಾ, ಅಷ್ಟು ಮಾಡಿಯೂ ಮತ್ತೆ ಮಾನ ಮರ್ಯಾದಿ ಬಿಟ್ಟು ಮತ ಕೇಳಲು ಬರುತ್ತಾರಲ್ಲಾ ಅದು ವಿಪರ್ಯಾಸ
ವಿಶ್ವನಾಥ ಸುಂಕಸಾಳ