ಹೆಣ್ಣು

Updated on: 

ಯಶಸ್ವಿ(ಯಾದ) ಪುರುಷನ ಹಿಂದೆಯೇ ಇರುವವಳು
    ಹೆಣ್ಣು ಬಾಳಿನ ಕಣ್ಣು, ಗಂಡು ಅದರ ಕನ್ನಡಕ
    ಗಂಡಿಗಿಂತಲೂ ಬೇಗನೇ ಮದುವೆಯಾಗಲು ಅವಕಾಶ ಉಳ್ಳವಳು
    ಕನ್ನಡಿಯ ಅಭಿಮಾನೀ ದೇವತೆ ಅಥವಾ ಅಭಿಮಾನಿನಿ
    ಸೌಂದರ್ಯದ ಗಣಿ ಎಲ್ಲರೂ ಈ ವಿಷಯದಲ್ಲಿ ಗಣಿ ಧಣಿಯಾಗಲು ಬಯಸುವವರೇ
    ಧಾರಾವಾಹಿಯ ಕೇಂದ್ರ ಬಿಂದು
    ಅಳುವ ಮೂಲಕ ಆಳುವವಳು
    ಹೆಣ್ಣೊಂದು ಹುಟ್ಟಿದರೆ ಬ್ಯೂಟಿ ಪಾರ್ಲರ್ ತೆರೆದಂತೆ
    ಹೊನ್ನನ್ನು ಕುತ್ತಿಗೆ ಮೇಲೆ ಹೊತ್ತುಕೊಳ್ಳಲು ಬಯಸುವವಳು
    ಇಂದಿನ ಹೆಣ್ಣು.. ನಾಳೆಯ ಹೆಂಡತಿ
    ಚೌಕಾಸಿ ಮಾಡಿ ಕಾಸು ಉಳಿಸುವ ಜಾಣೆ
    ಕಾಸು ಮತ್ತು ಕಾಸಿನ ಸರ ಇದ್ದರೆ ಖುಶಿಯೋ ಖುಶಿ
    ಅಬಲೆಯಲ್ಲ ಈಕೆ, ತನ್ನ ಬಲೆಗೆ ಬೀಳಿಸಿಕೊಳ್ಳಬಲ್ಲಷ್ಟು ಸಬಲೆ
    ಕೇಶೀ ರಾಣಿ
    ಮೀಸೆವಂತರ ಬಗ್ಗು ಬಡಿಯಲು ಮೀಸಲಾತಿಯ ಮೊರೆ ಹೊಕ್ಕವಳು
    ನೀರನ್ನು ಹೊತ್ತು ತರುವವಳೇ ನಾರಿ
    ಸ್ತ್ರೀ ಎಂದರೆ ಇಷ್ಟೇ ಸಾಕು
    ನಮ್ಮ ಹಿಂದಿದ್ದರೆ ಅವಳು ಬಾಳಿನ ಕಣ್ಣು, ನಾವೇ ಅದರ ಹಿಂದೆ ಬಿದ್ದರೆ ಬಾಳೇ ಮಣ್ಣು


-ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com