ಸೋಕಾಲ್ಡ್ ಸರ್ವಜ್ಞ
ರವಿ ಕಾಣದ್ದನ್ನೂ ಕಾಣುವವ, ರಾತ್ರಿ ಸತ್ಯವನ್ನೂ ಬಲ್ಲವ
ಸುದ್ದಿಯನ್ನು ಪ್ರಕಾಶಪಡಿಸುವವ, ಕತ್ತಲೆಯ ಸುದ್ದಿಗೂ ಬೆಳಕು ಚೆಲ್ಲುವವ
ಯಾರು ಏನು ಮಾಡಿಕೊಂಡರೆ ನಮಗೇನು ಎನ್ನುವವ ಒಳ್ಳೆಯ ಪತ್ರಕರ್ತನಾಗಲಾರ
ಸುದ್ದಿ ಶೋಧಕ ಸಮಿತಿಯ ಖಾಯಂ ಸದಸ್ಯ
ಇವರಲ್ಲಿ ಕೆಲವರು ಕಾರ್ಯನಿರತ ಪತ್ರಕರ್ತರು, ಇನ್ನೂ ಕೆಲವರು ಕಾರ್ಯ ಮರೆತ ಪತ್ರಕರ್ತರು
ಸಾವಿನ ಮನೆಯಲ್ಲೂ ಸುದ್ದಿ ಹುಡುಕುವವ
ಅನುಮಾನದ ಕಣ್ಣು, ಸುದ್ದಿ ಆಲಿಸುವ ಕಿವಿ, ಇವೆರಡೂ ಈತನಿಗಿರಬೇಕು
ಎಲ್ಲಿ ಏನು ಸೀದುಹೋದರೂ ಈತನ ಮೂಗಿಗೇ ವಾಸನೆ ಬರುವುದು
ಊರಿನ ಮೇಲಿನ ಸಂಗತಿಗಳಿಗೇ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಕರ್ಮ ಇವನದ್ದು
ಘಟನೆಗಳನ್ನೆಲ್ಲ ಅಕ್ಷರಗಳಲ್ಲಿ ಕಣ್ಣಿಗೆ ಕಟ್ಟುವಂತೆ ಹಿಡಿದಿಡುವ ಘಟನಾಪಟು
ಇವನ ಲೇಖನಿಯಷ್ಟೇ ಇವನ ಮೂಗು ಉದ್ದ ಮತ್ತು ಹರಿತ
ಆಧುನಿಕ ನಾರದ, ಕೈಯ್ಯಲ್ಲಿ ಮಾತ್ರ ಕೀಬೋರ್ಡ್
-ವಿಶ್ವನಾಥ ಸುಂಕಸಾಳ
vishwasunkasal@yahoo.com