ಶಿಕ್ಷಣ

Updated on: 

 ಶಿಕ್ಷೆಯಿಲ್ಲ ಬರೀ ಹಣ
    ಪ್ರಾಚೀನ ಕಾಲದಲ್ಲಿನ ಗುರು - ಶಿಷ್ಯರ ನಡುವಿನ ವಿದ್ಯೆಯ ಕೊಡು ಕೊಳ್ಳುವ ಪ್ರಕ್ರಿಯೆಯೇ ಶಿಕ್ಷಣ
    ಈಗಿನ ಕಾಲದಲ್ಲಿ ಇದು ಕೊಂಡುಕೊಳ್ಳುವ ಪ್ರಕ್ರಿಯೆಯಾಗಿ ಜಾರಿಯಲ್ಲಿದೆ
    "ನೀನು ಡೊನೇಷನ್ ಕೊಡು. ನಾನು ಡಿಗ್ರಿ ಕೊಡುತ್ತೇನೆ" ಇದು ಇಂದಿನ ಶಿಕ್ಷಣದ ಧ್ಯೇಯವಾಕ್ಯ
    ತಪ್ಪು ಮಾಡಿದರೂ ಶಿಕ್ಷೆ ವಿಧಿಸದ ಅಶಿಕ್ಷಾ ಅಭಿಯಾನ
    ಕ್ಷಣ ಕ್ಷಣಕ್ಕೂ ಇದರ ಬೆಲೆ ಏರುತ್ತಲೇ ಇದೆ. ಮೌಲ್ಯ ಮಾತ್ರ ಕುಸಿಯುತ್ತಿದೆ
    ಗುರಿಯೇ ಇಲ್ಲದವರನ್ನು ಗುರುವಲ್ಲದವ ಗುರಿಯಲ್ಲದ ಗುರಿಯತ್ತ ಮುನ್ನಡೆಸುವ ಅಥವಾ ಮುಂದೆ ಮುಂದಕ್ಕೆ ದೂಡುವ ಕ್ರಿಯೆ
    ಮೆಕಾಲೆಯೆಂಬ ಶತಮೂರ್ಖ ಬರೆದಿಟ್ಟುಹೋದ ಶತಕೋಟಿ ಮೂರ್ಖರ ಹಣೆಬರಹ
    ಜ್ಞಾನ ಮತ್ತು ಪ್ರಜ್ಞೆಯನ್ನು ಹೊರತುಪಡಿಸಿ ಉಳಿದದ್ದನ್ನೆಲ್ಲಾ ಪಡೆಯುವ ಮಾರ್ಗ
    ಹುಟ್ಟು ಬುದ್ಧಿವಂತನನ್ನು ದಡ್ಡನನ್ನಾಗಿಸುವ ಕ್ರಮ
    ವಿಶ್ವ ಮಾನವನ ಕಣ್ಣಿಗೆ ಪಟ್ಟಿ ಕಟ್ಟಿ, ಅಜ್ಞಾನಕ್ಕೆ ಪಟ್ಟ ಕಟ್ಟುವ ಪ್ರಕ್ರಿಯೆ
    ಅವರ ಊಟವನ್ನು ಅವರೇ ಪಡೆಯುವ ಸ್ವಾಲಂಬನೆಯನ್ನು ಕಲಿಸುವ ಬದಲಿಗೆ ಬಿಸಿ ಬಿಸಿ ಊಟ ಹಾಕಿ ಸೋಮಾರಿತನ ಕಲಿಸುವ ಮಾಧ್ಯಮ
    ಶಿಕ್ಷಣದಿಂದ ಎಲ್ಲರೂ ಡಿಗ್ರಿ ಪಡೆಯುತ್ತಿದ್ದಾರೆ. ಆದರೆ ಯಾರೂ ಮಾನವ ಪಡೆಯಬೇಕಾದ ಡಿಗ್ನಿಟಿಯನ್ನು ಪಡೆಯುತ್ತಿಲ್ಲ


-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com