ಶಿಕ್ಷಣ

Updated on: 

ಶಿಕ್ಷಕರ ಹೊಟ್ಟೆಪಾಡು.
    ಬಡವರ ಪಾಲಿನ ಗಗನ ಕುಸುಮ. ಉಳ್ಳವರ ಪಾಲಿನ ಬೀದಿ ಬದಿ ಮಾರಾಟಕ್ಕಿಟ್ಟ ಮಲ್ಲಿಗೆ ಹೂವು
    ಸಿಲೇಬಸ್ ಎಂಬ ಸಿಲ್ಲಿ ಮ್ಯಾಟರ್ ಹಿಂದೆ ಓಡುವ ಬಸ್
    ಇಲ್ಲಿ ಗಳಿಸಲಾಗುವ ಮಾರ್ಕೇ ನಿಮಗೆ ರಿಮಾರ್ಕು.
    ಸುಳ್ಳು ಇತಿಹಾಸದ ಸಿಂಹಾಸನದ ಮೇಲೆ ಕುಳ್ಳಿರಿಸಿ ಏರಿಸಲಾಗುವ ಭ್ರಮಾ ಕಿರೀಟವೇ ಶಿಕ್ಷಣ
    ಮನುಷ್ಯ ಮನುಷ್ಯನನ್ನು ಎಷ್ಟು ವಿಧಗಳಲ್ಲಿ ದ್ವೇಷಿಸಬಹುದು ಎಂಬುದನ್ನು ಕಲಿಸುತ್ತದೆ ಇವತ್ತಿನ ಶಿಕ್ಷಣ
    ಮಾಹಿತಿ ಪೂರಣ ಮಾಧ್ಯಮ
    ಶಿಕ್ಷಣವು ಶಿಕ್ಷಿತರು, ಸಾಮಾನ್ಯ ಮನುಷ್ಯರು ಮತ್ತು ಜ್ಞಾನಿಗಳು ಎಂಬ ಮೂರು ವರ್ಗಗಳನ್ನು ಸೃಷ್ಟಿಸುತ್ತಿದೆ
    ಖಾಸಗೀ ಶಿಕ್ಷಣ ಕೇಂದ್ರಗಳಂತೂ ವ್ಯವಹಾರದ ಅಡ್ಡೆ. ಅಲ್ಲಿ ಶಿಕ್ಷಣವನ್ನು ತೂಕಕ್ಕಿಡಲಾಗಿದೆ
    ತಮ್ಮ ಕೆಲಸವನ್ನು ಮಾಡಿಕೊಳ್ಳಲು ತಮಗೆ ಮುಜುಗರವಾಗದ ಭಾವವನ್ನು ಸೃಷ್ಟಿಸುವುದೇ ಶಿಕ್ಷಣದ ಧರ್ಮ
    ಶಿಕ್ಷಣವೆಂದರೆ ಕ್ಷಣ ಕ್ಷಣಕ್ಕೂ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ, ರೇಟನ್ನು ಹೆಚ್ಚಿಸಿಕೊಳ್ಳುತ್ತಿರುವ ಕ್ಷೇತ್ರ.
    ಅಂಕವೇ ಪ್ರಧಾನ. ಉಳಿದಿದ್ದೆಲ್ಲ ನಿಧಾನ
    ಕಲಿಯುಗದ ಕಲಿಧರ್ಮ
    ಮುಂದಿನ ಕಾಲದ ಕಲಿಗಳನ್ನು ನಿರ್ಮಿಸುವ ಕಲಿಕಾ ಕ್ಷೇತ್ರ
    ಕಾಲಕ್ಕೆ ತಕ್ಕಂತೆ ಬದಲಾಗದ್ದು ಇದೊಂದು ಮಾತ್ರ
    ಅಕ್ಷರವೆಂಬ ಶರವನ್ನು ನಿಮ್ಮ ಬತ್ತಳಿಕೆಗೆ ಸೇರಿಸುವ ಪ್ರಕ್ರಿಯೆ


-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com