ದೇಹ

Updated on: 

    ಭೌತಿಕ ದೃಷ್ಟಿಯವರಿಗಿದು ಕೇವಲ ಎಲುಬಿನ ಹಂದರ
    ಅನುಭಾವಿಗಳಿಗೆ ದೇಹವೇ ಮಂದಿರ
    ವಿವಿಧ ಬಗೆಯ ದಾಹದ ನೆಲೆವೀಡು
    ಆತ್ಮನೆಂಬ ಪರಮಾತ್ಮ ನೆಲೆಸುವ ಗುಡಿ ಈ ಇ್ಟಜಣ
    ಕಾಮನೆಗಳ ಮನೆ
    ಇಂದ್ರಿಯಗಳ ನಿಲಯ
    ಅವಯವಗಳ ಸಮೂಹ. ಅವಯವಿಯ ತಂಗುದಾಣ
    ಇದು ಚೇತನ ಮತ್ತು ಅಚೇತನಗಳ ಸಂಯೋಗ
    ದಪ್ಪಗಿರುವವರು ಕರಗಿಸಲು, ತೆಳ್ಳಗಿರುವವರು ಉಬ್ಬಿಸಲು ಶತಪ್ರಯತ್ನ ನಡೆಸುವುದುಇದಕ್ಕೋಸ್ಕರವೇ
    ದೇಹ ಬಗ್ಗಿಸಿ ದುಡಿಯುವವರಿಗೆ ಮೋಹ ದೂರ
     ಕ್ಷೇತ್ರಜ್ಞ ನೆಲೆಸುವ ಕ್ಷೇತ್ರ
    ಧರ್ಮ ಸಾಧನೆಗೆ ಆದ್ಯ ಮಾಧ್ಯಮ. ಅಧರ್ಮ ಸಾಧನೆಗೂ ಕೂಡ
    ದೇಹವೇ ದೇಗುಲವೆಂಬುದು ಹೌದಾದರೂ ಅಲಂಕಾರ, ನೈವೇದ್ಯಗಳೇ ಹೆಚ್ಚಾಗಬಾರದು
    ವಸನದಿಂದ ಮುಚ್ಚಿದರೇನು ವಾಸನೆಯ ಬಿಡದು
    ಜೀವಂತವಾಗಿದ್ದಾಗ ಅನೇಕ ಸೆಳೆತಗಳ ಮಿಳಿತ. ನಂತರ ಬರೀ ಕೊಳೆತ



-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com