ಇದು ಯಾರಿಗೆ ಯಾವುದರ ಮೇಲೆ ಉಂಟಾಗುತ್ತದೆಂದು ಹೇಳಲು ಸಾಧ್ಯವಿಲ್ಲ
ಮನಸ್ಸನ್ನು ಕರ್ಷಿಸುವಿಕೆ, ಬೇರೊಂದರತ್ತ ಎಳೆದುಕೊಳ್ಳುವಿಕೆ
ಆಕರ್ಷಣೆ ಮೂಡುವುದು ಮನಸ್ಸಿನಲ್ಲಾದರೂ ಪರಿಣಾಮ ಬೀರುವುದು ಮಾತ್ರ ಇಡೀ ದೇಹ-ವ್ಯಕ್ತಿತ್ವದ ಮೇಲೆ
ಜಗತ್ತಿನಲ್ಲಿ ಆಕರ್ಷಿಸುವ ಹಲವು ಸಂಗತಿಗಳಿವೆ. ಅದರ ಪರಿಣಾಮವೇ ಸಂಗಾತಿಗಳು
ಸೆಳೆಯಲ್ಪಡುವಿಕೆ ಅಥವಾ ಎಳೆಯಲ್ಪಡುವಿಕೆ
ಸೌಂದರ್ಯ ಗಂಡಸಿನ ಚಿತ್ತವನ್ನು ಆಕರ್ಷಿಸುತ್ತದೆ. ವಿತ್ತ ಹೆಣ್ಣನ್ನು ಹತ್ತಿರ ಆಕರ್ಷಿಸುತ್ತದೆ
ಒಬ್ಬನನ್ನು ಆಕರ್ಷಿಸಿದ ಸಂಗತಿ ಇನ್ನೊಬ್ಬನಿಗೆ ಥೂ ಇದೆಂತದ ಮಾರಾಯ ಅನಿಸಬಹುದು
ಸೆಳೆತ ಕಣ್ಣಿನಲ್ಲಿ ಶುರುವಾಗುತ್ತದೆ. ಅತಿಯಾದರೆ ಮೈ ಕೈಗೆಲ್ಲಾ ವ್ಯಾಪಿಸುತ್ತದೆ
ವಿರುದ್ಧ ಲಿಂಗಿಗಳಲ್ಲಿಯಷ್ಟೇ ಅಲ್ಲ, ಸಮಾನ ಲಿಂಗಿಗಳಲ್ಲೂ ಆಕರ್ಷಣೆ ಇದೆಯಂತೆ
ನಮ್ಮನ್ನು ಅರವತ್ತರೊಳಗೇ ಮರಳು ಮಾಡುವ ಕ್ರಿಯೆ
ಜಾಹೀರಾತಿನ ಮುಖ್ಯ ಉದ್ದೇಶ
ಉಚಿತವೆಂಬ ಬೋರ್ಡ್ ಎಲ್ಲರನ್ನೂ ಆಕರ್ಷಿಸುತ್ತದೆ, ಗಂಡನಿಗೆ ಮಾತ್ರ ತಳಮಳ ಹುಟ್ಟಿಸುತ್ತದೆ
ಕಣ್ಣಿಗೆ ಚೆಂದ, ಬಾಯಿಗೆ ರುಚಿ, ಮೂಗಿಗೆ ಸುವಾಸನೆ, ಚರ್ಮಕ್ಕೆ ಸುಖ, ಕಿವಿಗೆ ಇಂಪು ಇವುಗಳೇ ಆಕರ್ಷಣೆಯ ಮೂಲಸ್ರೋತಗಳು
ಮನಸ್ಸನ್ನು ಆಕರ್ಷಿಸುವುದೆಲ್ಲ ಕ್ಷಣಿಕ. ವಿವೇಕವನ್ನು ಆಕರ್ಷಿಸುವುದು ಯಾವುದೋ ಅದೇ ನಿತ್ಯ
ವಿಶ್ವನಾಥ ಸುಂಕಸಾಳ