ಚೆಂದ

Updated on: 

ಅಂದಕ್ಕೊಂದು ಮುದ್ದಾದ ಹೆಸರು
    ಸುಂದರ ಹಂದರ
    ಇದು ಭಾಗಶಃ ಸ್ತ್ರೀಲಿಂಗ
    ಮಗುವಿನ ನಗು
    ಪ್ರಿಯೆಯ ಮುಂಗುರುಳು ಮತ್ತು ತಾಯಿಯ ಹೆಂಗರುಳು
    ನಮ್ಮಿಷ್ಟದವರ ಮಾತು, ಕೃತಿ
    ಇದಕ್ಕೆ ಚಂದಾ ಇಲ್ಲ. ಯಾರು ಬೇಕಾದರೂ ಎಷ್ಟು ಬೇಕಾದರೂ ಸವಿಯಬಹುದು
    ಹಳ್ಳಿ ರಜೆಯಲಿ ಚೆಂದ. ಪೇಟೆ ಮೆರೆಯಲು ಚೆಂದ
    ಕಣ್ಣು ತೆರೆಸುವ ವಿಚಾರವಿದು
    ಬಿರುಗಣ್ಣಿನ ತುತ್ತು, ತಪ್ಪಿದರೆ ಕುತ್ತು
    ಹುಡುಗಿಯರು ತಮ್ಮ ಚೆಂದದ ಮೂಲಕವೇ ಹುಡುಗರ ಕೊಂದು ಚೆಂದ ನೋಡುತ್ತಾರೆ
    ಚಂದಾವರದ ಸೊಬಗು
    ಚೆಂದದ ಪುಸ್ತಕ ಓದಬೇಕೆಂದರೆ ಛೆಂದ ಪುಸ್ತಕ ಓದಬೇಕು
    ಸೊಬಗಿನ ಬಗೆಯನು ಸೊಗಸಾಗಿ ಹೇಳುವ ಪದ
    ಹೆಂಡತಿಗೆ ಮೂಗುತಿ ಚೆಂದ. ಗಂಡನಿಗೆ ಕರ್ಚೀ ಚೆಂದ
    ಕತೆಗಿಂತ ನೀತಿಯೇ ಚೆಂದ ಅನ್ನೋ ಹಾಗೆ ಕೆಲವೊಮ್ಮೆ ಊಟಕ್ಕಿಂತ ಉಪ್ಪಿನಕಾಯಿಯೇ ಚೆಂದವಿರುತ್ತದೆ
    ಪ್ರಿಯೆಯ ಪಿಸುಮಾತು ಚೆಂದ. ಹೆಂಡತಿಗೆ ಮೌನ ಚೆಂದ
    (ಕೆಲವನ್ನು) ದೂರದಿಂದ ನೋಡಲಷ್ಟೇ ಚೆಂದ, ಹತ್ತಿರ ಹೋದರೆ ದುರ್ಗಂಧ

ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com