ಮೂರ್ಖಾವಸ್ಥೆಗಿಂತ ಒಂದು ಮೆಟ್ಟಿಲು ಕೆಳಗಿನದ್ದು
ದೊಡ್ಡವರೆನಿಸಿಕೊಳ್ಳಲು ಮೀರಬೇಕಾದದ್ದು
ತಲೆಯೊಳಗೆ ತುಂಬಿರುವ ಹೆಡ್ಡತನ
ಬುದ್ಧಿವಂತಿಕೆ ಚೂರು ಗಿಡ್ಡ ಬಿದ್ದಾಗ ಆವರಿಸಿಕೊಳ್ಳುವಂಥದ್ದು
ಗುಡ್ಡ ಕಡಿದು ಇಲಿ ಹಿಡಿಯುವ ಪರಾಕ್ರಮ
ಬಡತನಕ್ಕೆ ಕಾರಣವಾದದ್ದು
ಹಗ್ಗವಿದೆಯೆಂಬ ಕಾರಣಕ್ಕೆ ದನವನ್ನು ಕೊಳ್ಳುವುದು
ಪ್ರೇಯಸಿ ಹೆಚ್ಚು ಎಂಜಾಯ್ ಮಾಡುವ, ಪ್ರಿಯಕರನಲ್ಲಿ ಇರುವ ಗುಣ
ಇದು ಗಂಡಸರದ್ದೇ ಆಸ್ತಿ, ಆದರೂ ಹೆಂಗಸರಲ್ಲೇ ಜಾಸ್ತಿ
ಇದನ್ನು ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಿಲ್ಲ ಎನ್ನುವುದು ಎಲ್ಲರ ಅನುಭವ
ಪಾಕಿಸ್ತಾನ ತಪ್ಪು ಮಾಡಿದಾಗಲೆಲ್ಲ ಭಾರತ ಪ್ರತಿಕ್ರಿಯಿಸುವ ರೀತಿಗೆಹೀಗೇ ಹೇಳುವುದು
ಕಲಿಯುಗ
ಕಲಿಯುವವರ ಶಕೆ
ಶೈಕ್ಷಣಿಕ ಯುಗ
ಕಲಿಯುಗದಲ್ಲಿನ ಧರ್ಮಕ್ಕೆ ಒಂದೇ ಕಾಲು
ಈ ಯುಗದಲ್ಲಿ ಪೆಟ್ರೋಲ್ ಮತ್ತು ನೀರಿಗೆ ಒಂದೇ ಬೆಲೆ, ಬಿಯರಿಗೆ ಮಾತ್ರ ಕಡಿಮೆ
ವಿಶ್ವನಾಥ ಸುಂಕಸಾಳ