ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷರಾದ ಸಿ.ಎಸ್. ದ್ವಾರಕಾನಾಥ್ ಅವರು ಶ್ರೀ ಜಯಚಾಮರಾಜೇಂದ್ರ ಒಡೆಯರ್ ವರ್ಧಂತಿಯ ಸಂದರ್ಭದಲ್ಲಿ ಮಾತನಾಡುತ್ತಾ, 'ನಾಲ್ವಡಿಯವರು ಹಣ ಕೊಟ್ಟಿದ್ದರಿಂದ ಕೆಆರ್ಎಸ್ ನಿರ್ಮಾಣವಾಯಿತು, ವಿಶ್ವೇಶ್ವರಯ್ಯನವರಿಗೆ ಹೆಸರು ದೊರೆಯಿತು. ವಿಶ್ವೇಶ್ವರಯ್ಯ ಕೇವಲ ಒಬ್ಬ ಇಂಜಿನಿಯರ್ ಅಷ್ಟೇ' ಎಂದರು. ಇದು ನಿಜಕ್ಕೂ ವಿಷಾದದ ಸಂಗತಿ (21.7.14) ಉನ್ನತ ಅಧಿಕಾರದಲ್ಲಿದ್ದರೂ ದಿವಾನ್ ವಿಶ್ವೇಶ್ವರಯ್ಯನವರು ಸ್ವಾರ್ಥಕ್ಕಾಗಿ ಹಣ-ಆಸ್ತಿ ಮಾಡಿಕೊಂಡಿರಲಿಲ್ಲ. ಅವರಲ್ಲಿದ್ದ ಅಪಾರ ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆಯಿಂದಾಗಿ ಕೆಆರ್ಎಸ್ ನಿರ್ಮಾಣ ಸಾಧ್ಯವಾಯಿತು. ಅವರ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ನಾಲ್ವಡಿಯವರು ಹಣ ದುರುಪಯೋಗಲಾರದೆಂಬ ವಿಶ್ವಾಸದಿಂದಲೇ ಹಣಕ್ಕೆ ವ್ಯವಸ್ಥೆ ಮಾಡಿದರೆಂದು ದ್ವಾರಕಾನಾಥ್ ಅವರಿಗೆ ಏಕೆ ತಿಳಿಯದೆ ಹೋಯಿತು ಎಂದು ಗೊತ್ತಾಗುತ್ತಿಲ್ಲ. ಅಂದ ಹಾಗೆ ದ್ವಾರಕಾನಾಥ್ ಅವರು ಮಾತನಾಡಿದ್ದು ನಾಲ್ವಡಿಯವರ ಬಗ್ಗೆ, ಜಯಚಾಮರಾಜೇಂದ್ರ ಒಡೆಯರ್ ವರ್ಧಂತಿಯ ಸಂದರ್ಭದಲ್ಲಿ!
-ಬಿ.ಎಸ್. ಸತೀಶ್, ಮೈಸೂರು
ಇದೆಂಥ ಶಾಕ್?
ವಿದ್ಯುತ್ ದರ ಹೆಚ್ಚಿಗೆ ಮಾಡಿ ತಿಂಗಳು ಕಳೆದಿಲ್ಲ. ಬಿಲ್ನಲ್ಲಿ ಖಖಉ ಡ್ಟಿ ಛಿಜ ಕಿಛ್ಝಜ ಖಡ.230-00 (ಐ್ಜಟ್ಟ್ಠಿಜ ್ಝಜಿ ಕಿಛ್ಝಜ)ಎಂದು ಹೇಳಲಾಗಿತ್ತು. ಬಿಲ್ ಹಿಡಿದು ಕಛೇರಿಗೆ ಹೋದರೆ, ಅದು 'ಅಡಿಶನಲ್ ಸೆಕ್ಯೂರಿಟಿ ಡಿಪಾಸಿಟ್' ಕಡ್ಡಾಯ ನಿಮಗೆ ಬಡ್ಡಿ ಬರುತ್ತದೆ ಎಂಬ ಮಾತು. ಮಾನ್ಯ ಮಂತ್ರಿವರ್ಯರೇ, ನೀವೇನು ಪ್ರಜಾಪ್ರತಿನಿಧಿಗಳೋ, ಪ್ರಜಾ ಹಿಂಸಕರೋ? ಶೇ. 50 ಭಾಗ ವಿದ್ಯುತ್ ದುರುಪಯೋಗವಾದಾಗ, ಶಿಕ್ಷೆ ಎಂಬ ಮಾತು ಸುಳ್ಳು. ಎಲ್ಲಿ ಬೇಕಾದರೂ ತಂತಿಗೆ -ತಂತಿ ಆನಿಸಿ ವಿದ್ಯುತ್ ಪಡೆಯುವ ದೃಶ್ಯಗಳನ್ನು ನೋಡುತ್ತಿದ್ದೇವೆ.. ರಾಜ್ಯದ ತುಂಬೆಲ್ಲ ಈ ದಂಧೆ ನಡೆಯುತ್ತಿದೆ. ರಾಜ್ಯದ ತುಂಬೆಲ್ಲಾ ಪುಡಾರಿಗಳ ಮಿಲ್ಗಳು, ಶುಗರ್ ಫ್ಯಾಕ್ಟರಿಗಳು, ಅಡಿಕೆ ಬೆಳೆಗೆ ಪಂಪು ಸೆಟ್ಗಳು ನಿರಂತರವಾಗಿ ಹಗಲು-ರಾತ್ರಿಯೆನ್ನದೇ ಓಡುತ್ತಿರುತ್ತದೆ. ಪೊಲೀಸ್ ಕಳ್ಳನಾದರೆ ಹಿಡಿಯುವವರಾರು?
-ಸಿ.ಎಂ. ಮೃತ್ಯುಂಜಯಪ್ಪ, ಚಿತ್ರದುರ್ಗ
ಜಾತಿ ಗಣತಿ ನಡೆಯಲಿ
ಹಿಂದಿನ ಬಿಜೆಪಿ ಸರ್ಕಾರ ಜಾತಿಗಣತಿಯನ್ನು ನಿರ್ಲಕ್ಷಿಸಿತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜಾತಿಗಣತಿಗೆ ಮುಂದಾಗಿದೆ. ಇದು ಮುಖ್ಯಮಂತ್ರಿಯವರ ಒಳ್ಳೆಯ ನಿರ್ಧಾರವೇ ಆಗಿದೆ. ಜಾತಿವಾರು ಜನಗಣತಿಗಾಗಿ ಸರ್ಕಾರವು ಸಾಕಷ್ಟು ಹಣ, ಖರ್ಚು ಮಾಡುತ್ತಿದ್ದು, ಪ್ರತಿಯೊಂದು ಜಾತಿಯ ಸಮಗ್ರ ಹಾಗೂ ವಿಸ್ತೃತ ಮಾಹಿತಿಯನ್ನು ಸಂಗ್ರಹಿಸಬೇಕಾಗಿದೆ. ಪ್ರತಿಯೊಂದು ಜಾತಿಯ ಜನನ ಪ್ರಮಾಣ ದರ, ಮರಣ ಪ್ರಮಾಣ ದರ, ವಿವಾಹ ಪ್ರಮಾಣ ದರ, ಆತ್ಮಹತ್ಯೆ ಪ್ರಮಾಣ ದರ, ಜಾತಿವಾರು ಕುಡುಕರ ಪ್ರಮಾಣ ದರ ಇಂತಹ ಹಲವಾರು ಸಮಗ್ರ ಮಾಹಿತಿಗಳನ್ನು ಸಂಗ್ರಹಿಸಬೇಕಾಗಿದೆ.
-ಶಿವಕುಮಾರ್ ಕೆ.ಎಸ್., ಬೆಂಗಳೂರು
ಯಾವ ಶಿಕ್ಷಣ ಬೇಕು?
'ಲೈಂಗಿಕ ಶಿಕ್ಷಣ' ಹಾಗೂ 'ಅತ್ಯಾಚಾರ'ಗಳ ಕುರಿತ ಲೇಖನಗಳ ಬಗ್ಗೆ ಅಭಿಪ್ರಾಯ. ವಾಸ್ತವವಾಗಿ ಗಂಡು ಹಾಗೂ ಹೆಣ್ಣಿಗೆ ಬೇಕಾಗಿರುವುದು ಮಾತೃತ್ವ ಹಾಗೂ ಪಿತೃತ್ವದ ಶಿಕ್ಷಣವೇ ಹೊರತು ಲೈಂಗಿಕ ಶಿಕ್ಷಣ ಖಂಡಿತ ಅಲ್ಲ. ಅಸಮಾನತೆಗಳು ತುಂಬಿರುವ ನಮ್ಮ ನಾಡಿನಲ್ಲಿ ಯಾವುದೇ ರೀತಿಯ ಲೈಂಗಿಕ ಶಿಕ್ಷಣ ಒಂದು ವ್ಯಾಪಾರವಾಗುವ ಭಯ ಇದೆ ಹಾಗೂ ಶೋಷಣೆ ಹಾಗೂ ಅತ್ಯಾಚಾರಗಳಿಗೆ ತೆರೆದ ಬಾಗಿಲು ಆಗಬಲ್ಲದು. ಕೇವಲ ಮಾತೃತ್ವ ಹಾಗೂ ಪಿತೃತ್ವದ ಶಿಕ್ಷಣ ಮಾತ್ರ ವ್ಯಾಪಾರಿ ವಲಯದಿಂದ ಹೊರ ಉಳಿದು ಸಮಾಜದ ಪ್ರಗತಿಗೆ ದಾರಿಯಾಗಬಲ್ಲದು.
-ಕೆ. ಪ್ರಕಾಶ್, ಬಳ್ಳಾರಿ