ಬೆಂಗಳೂರು

ಬೆಂಗಳೂರು
= ಇಲ್ಲಿ ಎಲ್ಲರ ಬೇಳೆಯೂ ಬೇಯುತ್ತದೆ. ಹಾಗಾಗಿಯೇ ಇದು ಬೆಂದಕಾಳೂರು
= ಬಂಗಲೆಗಳ ಊರು
= ಬ್ಯಾಂಗಲ್‌ತೊಡುವವರು ಇಲ್ಲಿ ಕಡಿಮೆಯೇ. ಆದರೂ ಇದು ಬ್ಯಾಂಗಲ್ ಊರು
= ಇದನ್ನು ಒಂದೇ ಶಬ್ದದಲ್ಲಿ ವ್ಯಾಖ್ಯಾನಿಸುವುದಾದರೆ ಇದು ಬೆಂ'ಗೋಳೂರು'
= ಹೋರಾಟ ಮತ್ತು ಹಾರಾಟ ಎರಡಕ್ಕೂ ಇದು ನೆಲೆವೀಡು
= ಓದಿದವರೆಲ್ಲ ಬಂದು ಸೇರುವ, ಪ್ರತಿಕ್ಷಣ ಓಡುತ್ತಲೇ ಇರುವ ರನ್‌ವೇ
= ನಾಗಾಲೋಟ ಮತ್ತು ನೂಕಲಾಟಗಳ ತಾಕಲಾಟ ಇಲ್ಲಿನ ಬದುಕು
= ಇಲ್ಲಿ ಹೊಟ್ಟೆಗೆ ಅನ್ನ ತಿನ್ನುವವರು ಕಡಿಮೆಯೇ. ಪಿಜ್ಜ ಬರ್ಗರ್‌ಗಳೇ ಜಾಸ್ತಿ
= ಇಲ್ಲಿ ಬೈಕ್ ಚಾಲನೆ ಪರಿಣತಿ ಗಳಿಸಿದವರನ್ನು ಹಳ್ಳಿಗಳ ಜಾತ್ರೆಗೆ ಸಾಹಸ ಪ್ರದರ್ಶನಕ್ಕೆ ಕರೆಸಬಹುದು
= ಆಡಂಬರಗಳ ಆಡಂಬೊಲ
= ಬಳಸಿದ್ದು ಸಾಕು ಎನಿಸಿದ ಕೂಡಲೇ 'ಬಿಸಾಕು' ಎನ್ನುವ ಸಂಸ್ಕೃತಿಯ ತವರೂರು.

-ವಿಶ್ವನಾಥ ಸುಂಕಸಾಳ
vishwasunkasal@yahoo.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com