ಆರ್.ಸಿ. ಪರಶುರಾಮ, ಶಿಕಾರಿಪುರ, 9902203492
ಸಂಸಾರ ಸುಸೂತ್ರವಾಗಿ ಸಾಗಬೇಕಾದರೆ ಸೂತ್ರಧಾರಿಯಾಗಬೇಕಿರುವುದು ಗಂಡನೋ ಹೆಂಡತಿಯೋ?
ಗಂಡ 'ರಾಜೀಸೂತ್ರ'ಧಾರಿಯಾಗಿರಬೇಕು!
ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
21ನೇ ಶತಮಾನದ ನನ್ನ ಗೆಳೆಯ ಸೇರುವುದಕ್ಕೆ ಕರೆದಾಗೆಲ್ಲ ಕಾಯಕವೇ ಕೈಲಾಸ ಎನ್ನುತ್ತಾನಲ್ಲ?
ಅದರರ್ಥ ಸೇರಲುಬಂದರೆ ಕೈ'ಲಾಸ' ಅಂತ!
ಮೊಳಕಾಲ್ಮೂರು ಸುರೇಶ, ಬಳ್ಳಾರಿ
ನಾನು ಮೆಚ್ಚಿ ಮದುವೆಯಾದ ಹೆಂಡತಿ ಈಗ ಪೀಪಾಯಿ ಆಗಿದ್ದಾಳಲ್ಲ?
ಅವಳು ಸಿಟ್ಟಿಗೆದ್ದರೆ ಅದನ್ನು 'ಪೀಪಾಯಿ' ದಂಗೆ ಎಂದು ಕರೆಯಬಹುದು!
ಫ್ಯಾಷನ್ ಡಿಸೈನರ್ ಮಧು, 9945737427
ಮದುವೆ ಕೆಲವರಿಗೆ ವರವಾಗಿ ಪರಿಣಮಿಸಿದರೆ ಇನ್ನು ಕೆಲವರಿಗೆ?
ವಧುವಾಗಿ ಪರಿಣಮಿಸುತ್ತದೆ!
ಸಿ. ಲಾಗರಾಜ, ಅರದೋಟ್ಲು, ಭದ್ರಾವತಿ
ಸಾಹಿತ್ಯ ಕೃತಿಯೊಂದು ಅರ್ಥವಾಗದಿರಲು ಕಾರಣವೇನು?
ಅದಕ್ಕೆ ಪ್ರಶಸ್ತಿ ಸಿಗುವ ಸಾಧ್ಯತೆ ಇರುವುದರ ಮುನ್ಸೂಚನೆಯಿದು!
ಬಾಣಭಟ್ಟ