ಕೋಲ್ಯನ ತುಟಿ ಸುಟ್ಟು ಹೋಗಿತ್ತು.
ಗೆಳೆಯ: ಹೇಗೆ ಸುಟ್ಟಿತೋ?
ಕೋಲ್ಯ: ಹೆಂಡತೀನ ಊರಿಗೆ ಕಳಿಸೋಕೆ ರೇಲ್ವೆ ಸ್ಟೇಷನ್ಗೆ ಹೋಗಿದ್ದೆ...
ಗೆಳೆಯ: ಹೂಂ...
ಕೋಲ್ಯ: ಖುಷಿ ತಡಕೊಳ್ಳೋಕ್ಕಾಗ್ದೆ ಟ್ರೇನ್ ಇಂಜಿನ್ಗೆ ಮುತ್ತು ಕೊಟ್ಟುಬಿಟ್ಟೆ!
ನನನ
ಕೋಲ್ಯನಿಗೆ ಎದುರಾದವರು ಯಾರೋ ವಿಚಾರಿಸಿದರು.
'ನಾನು ಯಾರು ಅಂತ ನೆನಪಿದೆಯಾ, ಹೇಳು ನೋಡೋಣ?'
ಕೋಲ್ಯ: ಅಷ್ಟೆಲ್ಲ ನೆನಪಿಟ್ಟುಕೊಳ್ಳೋ ತಾಕತ್ತು ಇದ್ದಿದ್ರೆ ಓದೋ ದಿನಗಳಲ್ಲಿ ರ್ಯಾಂಕ್ ಪಡ್ಕೋತಿರ್ಲಿಲ್ವಾ? ಅಲ್ಲಿ ಪರೀಕ್ಷೆ ಮಾಡಿದ್ದು ಸಾಲ್ದು ಅಂತ, ಇಲ್ಲೂ ಮೆಮೋರಿ ಟೆಸ್ಟಾ?