ಬಡವ

Updated on: 

ಬಡವ
    ಸಮಾಜದ ದರಿದ್ರ ವ್ಯವಸ್ಥೆಯ ವಶಾತ್ ದರಿದ್ರನಾದವ
    ಆಲಸ್ಯ, ಅಜ್ಞಾನ, ಅವಿವೇಕದ ಸಂತಾನ
    ಹೃದಯ ಹೀನನೇ ನಿಜವಾದ ಬಡವ
    ವಿಟಾಮಿನ್ ಎಮ್ ಕೊರತೆಯುಳ್ಳವ
    ಹಣವಿಲ್ಲದೇ ಮುಖ ಮತ್ತು ಹೊಟ್ಟೆ ಒಣಗಿಸಿಕೊಂಡವ
    ದೇಶದ ಆರ್ಥಿಕತೆಯಲ್ಲಿ ಈತ ಆಟಕ್ಕುಂಟು ಲೆಕ್ಕಕ್ಕಿಲ್ಲ
    ಈತನ ಮನೆಯ ಊಟ ತುಂಬಾ ರುಚಿ. ಪ್ರೀತಿಯ ಆಸ್ವಾದ ಗೊತ್ತಿರುವವನಿಗೆ ಮಾತ್ರ
    ಶ್ರೀಮಂತನ ಶ್ರೀಮಂತಿಕೆಗೆ ಅಡಿಪಾಯ ಈತ
    ಬಡತನ ನಿವಾರಣೆಯ ಹೆಸರಲ್ಲಿ ಬಡವರ ನಿರ್ಮೂಲನೆಗೆ ಹೊರಟವರೇ ಎಲ್ಲ
    ಬಡವನಾಗಿ ಹುಟ್ಟುವುದು ತಪ್ಪಲ್ಲ. ಬಡವನಾಗಿಯೇ ಸಾಯುವುದು ತಪ್ಪು
    ಸಾಲದ ಶೂಲಕ್ಕೆ ತನ್ನನ್ನು ತಾನೇ ಚುಚ್ಚಿಸಿಕೊಂಡವನು
    ಈತ ಸಾವಿನ ನಂತರ ನರಕಕ್ಕೆ ಹೋಗುವುದಿಲ್ಲ. ಕಾರಣ, ಇಲ್ಲೇ ಅದನ್ನು ಅನುಭವಿಸಿ ತೀರಿರುವುದರಿಂದ ಈತನ ಕಣ್ಣಲ್ಲಿ ಕನಸುಗಳೂ ಸತ್ತಿರುತ್ತವೆ

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com