ಹಬ್ಬ
ಮಡಿ ಮೈಲಿಗೆಗೆಂದೇ ಪ್ರತ್ಯೇಕ ದಿನ
ಊರಿಗೆ ತೆರಳಲೊಂದು ಶುಭ ಮುಹೂರ್ತ
ರಜೆ ಕೇಳಲೊಂದು ನೆಪ
ನಿತ್ಯಕ್ಕೆ ಅಕ್ಕಿಯಿಲ್ಲದಿದ್ದರೂ ಹಬ್ಬಕ್ಕೆ ಸಬ್ಬಕ್ಕಿ ಪಾಯಸ
ಸಂತಸದ ಅಲೆ ಮನಸಿನ ಮೂಲೆಯಲ್ಲಿ ದ್ದಾಗಲೆಲ್ಲಾ ಹಬ್ಬವೇ
ಕೆಲವರಿಗೆ ಪಬ್ಬಿಗೆ ಹೋಗುವುದೇ ದೊಡ್ಡ ಹಬ್ಬ
ನಿತ್ಯ ಕರ್ಮವನು ಬದಿಗಿಟ್ಟು, ನೈಮಿತ್ತಿಕ ಅನುಷ್ಠಾನಗಳಿಗೆ ಕೊಡುವ ಮನ್ನಣೆ
ನಿತ್ಯ ರಣ ರಣ ಮನೆಯ ತುಂಬಾ ಸುತ್ತ ತಳಿರು ತೋರಣ
ಅಜ್ಜಿ ಆಯಿಯರೊಂದಿಗೆ ಕಜ್ಜಾಯ ಮೆಲ್ಲುವ ತವಕ
ಕಚೇರಿಗೆ ರಜೆ ಕೊಟ್ಟಾಗಲೇ ಹಲವರಿಗೆ ಹಬ್ಬ
ಬೆಂಗಳೂರು ಖಾಲಿ, ಹಳ್ಳಿ ಬಸ್ಸು ಜೋಲಿ
ಭಾರತದ ವಿವಿಧತೆಯ ಪ್ರತೀಕ್ಙ
ಸಂಸ್ಕೃತಿಯ ಉದ್ದೀಪಕ
ಜ್ಞಾನ ಸಂಸ್ಕಾರಗಳ ಪ್ರದೀಪಕ
-ವಿಶ್ವನಾಥ ಸುಂಕಸಾಳ
vishwasunkasal@yahoo.com