ಅನುಭವಿಸಿದರೂ ಕೆಲವೊಮ್ಮೆ ಆವಿರ್ಭವಿಸದ ಜ್ಞಾನ
ಭವದಲ್ಲಿದ್ದೂ ಸಂಭವಿಸದ ತಿಳಿವಳಿಕೆ
ಅನುಭಾವಕ್ಕೇರಲು ಇರುವ ಮೊದಲ ತಳಮಟ್ಟದ ಅರ್ಹತೆ
ಅನನುಭವವೇ ಅನುಭವದ ಮೆಟ್ಟಿಲು, ಜಾರಿದರೆ ತೊಟ್ಟಿಲು
ಅನನುಭವಿಯನ್ನು ಆರಿಸಿ ರಾಜನಾಗಯ್ಯಾ ಎಂದು ಕಳಿಸಿದರೆ, ಆತ ಅನಾರ್ಕಿಯಾಗಿ ಪಿರ್ಕಿಯಂತಾಡುತ್ತಾನೆ
ಅನುಭವ ಮಂಟಪದ ನೆಲೆಗಟ್ಟು
ಜವಾಬ್ದಾರಿಯ ಕೆಲಸಗಳಿಂದ ತಪ್ಪಿಸಿಕೊಳ್ಳಲು ಇರುವ ಒಳ್ಳೆ ನೆಪ
ನಾವೇ ಬಯಸಿ ಕೆಲಸಕ್ಕೆ ಅರ್ಜಿ ಹಾಕಿದಾಗಲೂ ಕೆಲಸವನ್ನು ತಪ್ಪಿಸುವ ಶತ್ರು
ಇದು ಇರುವಲ್ಲಿ ಕಲಿಕೆಗೆ ಅವಕಾಶವಿರುತ್ತದೆ
ಅನನುಭವ ತಪ್ಪಲ್ಲ, ಹಾಗೆ ಹೇಳಿಕೊಂಡು ತಿರುಗುವುದು ತಪ್ಪು
ನಮ್ಮ ಸೋಲಿಗೆ ನಾವು ಕೊಟ್ಟುಕೊಳ್ಳಬಹುದಾದ ಸಮಜಾಯಿಷಿ
ಕೆಟ್ಟ ವಿಷಯದಲ್ಲಿ ಅನನುಭವ ಮೆರಿಟ್, ಒಳ್ಳೆಯ ವಿಷಯದಲ್ಲಿ ಅನನುಭವ ಡಿ ಮೆರಿಟ್
ಅನುಭವಕ್ಕೆ ಒಂದೇ ಜನಕ-ಪ್ರಯತ್ನ. ಅನನುಭವಕ್ಕೆ ಹಲವು ತಾಯಿ- ನಿಷ್ಕ್ರಿಯತೆ, ಜಡತ್ವ, ಆಲಸ್ಯ..
ಇದು ಸೋಲಿನಲ್ಲಿ ನಮ್ಮ ಜೊತೆ ಇರುತ್ತದೆ, ಕಾರಣೀಕರ್ತನ ರೂಪದಲ್ಲಿ
ಇದನ್ನು ಸಂಪಾದಿಸುವುದಕ್ಕಾಗುವುದಿಲ್ಲ, ಕಳೆದುಕೊಳ್ಳಬಹುದು
ಎಷ್ಟೋ ಎಡವಟ್ಟುಗಳಿಗೆಲ್ಲ ಇದೇ ಕಾರಣ
-ವಿಶ್ವನಾಥ ಸುಂಕಸಾಳ
vishwasunkasal@yahoo.com