ಸಿರಿ

Updated on: 

ಸಿರಿ
    ಐಸಿರಿಯಂ ಗೆಲ್ಗೆ ಎನ್ನುವುದೇ ಹಲವರ ಮೂಲಮಂತ್ರ
    ಬುದ್ಧಿಯನ್ನೆಲ್ಲ ಸುರುವಿ ಕೂಡಿ ಹಾಕುವುದು ಇದನ್ನೇ
    ಬದುಕು ಸೊಂಪಾಗಿರಲು ಬೇಕಾದ ಸಂಪತ್ತು
    ಕಂಡಕಂಡಲ್ಲಿ ಸುರಿದರೆ ತಪ್ಪದು ಆಪತ್ತು
    ಶ್ರೀಪತಿಯ ದಾಸ್ತಾನು ಮಳಿಗೆಯ ಹೆಸರು
    ಸಿರಿಯನ್ನು ಸೋರಿ ಹೋಗದಂತೆ ಕಟ್ಟಿಹಾಕುವುದೇ ಸವಾಲು
    ಲಕ್ಷಾಧಿಪತಿಯ ಯಶಸ್ಸಿನ ಹಿಂದಿರುವ ಲಕ್ಷ್ಮಿ
    ಮಾನವನ್ನೂ ಜೊತೆಗೇ ತರುವ ಧನ
    ಸಾವಯವ ಸುರಿಹೊಂಡ; ರೈತನ ಪಾಲಿಗೆ ಅದು ಸಿರಿಹೊಂಡವೇ ಸರಿ
    ಹೆಂಡತಿ ಕೇಳಿದ್ದಕ್ಕೆಲ್ಲ ಸರಿ ಎನ್ನುವವನಿಗೆ ಸಿರಿ ಎಷ್ಟಿದ್ದರೂ ಸಾಲದು
    ಇದಿಲ್ಲದ್ದರೆ ಅದೇ ವರಿ. ಇದ್ದಾಗ ಕಾದುಕೊಳ್ಳುವುದೇ ದೊಡ್ಡ ವರಿ
    ಕಣಕಣದಿಂದಲೂ ಹಣವನ್ನು ಅರ್ಜಿಸುವವನಿಗೆ ಕೊರತೆಯಾಗದ ವಿಟಾಮಿನ್
    ವಿತ್ತೋಪಾಸಕರ ದೇವತೆ
    ಸಿರಿಯ ಪ್ರದರ್ಶನ ಸಾರಿಯ ಮೂಲಕ
    ಹಸಿರಿಗಿಂತ ಶ್ರೇಷ್ಠವಾದ ಸಿರಿ ಯಾವುದೂ ಇಲ್ಲ

ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com