ನಾಳೆಯ ತಂದೆ
ಹಿರಿಯರ ಗುರು
ಮುಗ್ಧ ಪದದ ಸಮಾನಾರ್ಥಕ
ತನ್ನ ಕಿಲಕಿಲ ನಗುವಿನ ಮೂಲಕ ಮನೆಯ ಕಲರವದ ಕಾರಕ
ಇಟ್ಟಿದ್ದನ್ನೆಲ್ಲ ಕೆಡವುವ ವಿಧ್ವಂಸಕ
ಜಗತ್ತನ್ನೇ ತನ್ನ ತಲೆಯ ಮೇಲೆ ಹೊತ್ತವರಂತೆ; ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆವವ
ಕೂಗಾಟ, ಚೀರಾಟ, ರಂಪಾಟಗಳೇ ಇದರ ಆಯುಧ
ಮುಗುಮ್ಮಾಗಿ ಕುಳಿತವರ ಬಾಯನ್ನೂ ಬಿಡಿಸಬಲ್ಲ ಮಾಂತ್ರಿಕ
ಬಯಸಿದ್ದನ್ನೆಲ್ಲ ಪಡೆದೇ ತೀರುವ ಹಠಮಾರಿ
ಮಗು ದೇವರಿಗೆ ಸಮಾನ. ಅವನು ನೈವೇದ್ಯ ಬೇಡುತ್ತಾನೆ, ಇವನು ಪ್ರಸಾದ
ನಿಂತಲ್ಲೇ ತೀರ್ಥ ಕೊಡುವವ
ತಂದೆ ತಾಯಿಯರ ಕನಸು
ಗಂಡಾದರೆ ವಂಶೋದ್ಧಾರಕ, ಹೆಣ್ಣಾದರೆ ಪರವಂಶ ಪ್ರದೀಪಿಕಾ
ಶಬ್ದ ಮಾಲಿನ್ಯದ ಪ್ರವರ್ತಕ
ಅಳುವ ಮೂಲಕ ಆಳುವವ
-ವಿಶ್ವನಾಥ ಸುಂಕಸಾಳ
vishwasunkasal@yahoo.com