ಏನನ್ನಾದರೂ ಪಡೆಯಬೇಕೆಂದರೆ ಸ್ವಲ್ಪ ನೀಡಬೇಕಾಗುತ್ತದೆ. ಪ್ರಶಸ್ತಿಗೂ ಈ ಮಾತು ಅನ್ವಯಿಸುತ್ತದೆ
ಚಾ ಮೇಲಿನ ಕಾಮೆಂಟಿಗೆ ಚಾಡಿ ಎನ್ನಬಹುದು
ಮಲಗಲೂ ಜಾಗವಿಲ್ಲದೇ ಬೆಳಗಿನವರೆಗೆ ಕುಳಿತೇ ಕಳೆಯುವುದಕ್ಕೆ 'ಜಾಗರಣೆ' ಎನ್ನಬಹುದು
ಮಾಲ್ಗಳು ಗ್ರಾಹಕರನ್ನು ಆಕರ್ಷಿಸಲು ಮಾಡುವ ಚಮತ್ಕಾರಗಳಿಗೆ 'ಕಮಾಲ್' ಎನ್ನಬಹುದು
ಸರ್ವೇ ಜನಾಃ ಸುಖಿನೋ ಭವಂತು ಎನ್ನುವ ನಮ್ಮ ಹಿರಿಯರೇ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಎಂದೂ ಆಶಿಸುತ್ತಾರೆ. ಎಂಥ ವಿರೋಧಾಭಾಸ...?!
ಗಳಿಸಲು ಗಂಡನಿಗೆ ವರುಷ, ಕಳೆಯಲು ಹೆಂಡತಿಗೆ ನಿಮಿಷ
ಭಾರತದ ರಸ್ತೆಗಳ ಮೇಲೆ ಸುರಕ್ಷಿತವಾಗಿ ಪ್ರಯಾಣಿಸಬಲ್ಲ ವಾಹನವೆಂದರೆ ಅದು ವಿಮಾನ ಮಾತ್ರ
ಹೆಂಡತಿಯನ್ನು ಕೇಳದೇ ಮಾಡಬಹುದಾದ ಒಂದೇ ಒಂದು ಕೆಲಸವೆಂದರೆ ನಿಶ್ಶಬ್ದವಾಗಿ ಆಕಳಿಸುವುದು
ಮದುವೆಗೆ ವರಿಸುವಿಕೆ ಎನ್ನುವುದಾದರೆ, ವಿಚ್ಛೇದನಕ್ಕೆ 'ಡೈವರಿಸುವಿಕೆ' ಎನ್ನಬಹುದು
ಕಣ್ಣಿನಲ್ಲೇ ಕುಡಿತಕ್ಕೆ ಆಹ್ವಾನಿಸುವ ನೋಟವನ್ನು ಕುಡಿನೋಟ ಎನ್ನಬಹುದು
ಜಗತ್ತಿನಲ್ಲಿ ಸುಖಿಗಳು ಹೆಚ್ಚೇನೂ ಇಲ್ಲ ಎನ್ನಬಹುದು. ಅಷ್ಟಕ್ಕೂ ಅವಿವಾಹಿತರು ಎಷ್ಟಿದ್ದಾರೆ ಜಗತ್ತಿನಲ್ಲಿ...?!
-ವಿಶ್ವನಾಥ ಸುಂಕಸಾಳ
vishwasunkasal@yahoo.com