ವಿ. ಹೇಮಂತಕುಮಾರ, ಬೆಂಗಳೂರು, 9035992900
ಕಾಫಿ ಶಾಪ್ನಲ್ಲಿ ಶುರುವಾಗಿ ವೈನ್ಶಾಪ್ನಲ್ಲಿ ಮುಕ್ತಾಯವಾಗುವುದು ಯಾವುದು?
ಹುಡುಗರ ಲವ್ವು!
ಮೊಳಕಾಲ್ಮೂರು ಸುರೇಶ, ಬಳ್ಳಾರಿ
ಈ ಆಯಾರಾಂ ಗಯಾರಾಂಗಳಿಗೆ ರಾಮ್ ಬುದ್ಧಿ ಕೊಡುವುದೆಂತು?
ಕಾಶಿ ವಿಶ್ವನಾಥನಾದರೂ ಬುದ್ಧಿ ಕೊಡುತ್ತಾನಾ ನೋಡೋಣ.
ಚಿರಪ್ರಭ ನಂಜನಗೂಡು, 8553793107
18 ಸಾವಿರ ಕೋಟಿ ರುಪಾಯಿಗಳ ಆಧಾರ್ ಹಗರಣದ ರೂವಾರಿಗಳ ಮುಂದಿನ ನಡೆಯೇನು?
ಎಲ್ಲವೂ ನಿರಾಧಾರ ಎಂದು 'ಕೈ' ಎತ್ತಿಬಿಡುವುದು!
ಕೊ.ಸು. ನರಸಿಂಹಮೂರ್ತಿ, ಮೈಸೂರು, 9945271782
ಮತದಾರರು ಪಖಾಂತರಿ ರಾಜಕಾರಣಿಗಳಿಂದ ಏನನ್ನು ನಿರೀಕ್ಷಿಸುತ್ತಾರೆ?
ಕ್ಷೇತ್ರಾಂತರ!
ನಂದ ಯಡಿಯೂರು, 9880055196
ಕುಡಿಯೋಕೆ ಲಿಮಿಟ್ಟಿಲ್ಲಾ. ಸಾವಿಗೆ?
ಮುಹೂರ್ತವಿಲ್ಲ!