ಊರ ಮೇಲಿನ ಸುದ್ದಿಗಳೆಲ್ಲ ಸುರುವಿ ಬೀಳುವ ಕೇಂದ್ರ
ಯಾರು ಸತ್ತರೂ ಇಲ್ಲಿ ಸೂತಕ
ಗಾಸಿಪ್ಪನ್ನೇ ಸಿಪ್ ಆಗಿ ಹೀರುವ ಜಾಗ
ಇಲ್ಲಿ ಮಾಡುವ ಸಣ್ಣ ತಪ್ಪೂ, ತಪ್ಪುಗಳ ಸುನಾಮಿಯನ್ನೇ ಎಬ್ಬಿಸುತ್ತದೆ
ಬೇರೆಯವರ ಸುದ್ದಿ ನನಗ್ಯಾಕೆ ಎನ್ನುವಂಥ ಸ್ವಭಾವದವರಿಗೆ ಇಲ್ಲಿ ಜಾಗವಿಲ್ಲೆ
ಸಮಾಜದ ಹುಣ್ಣಿಗೆ ಹಿಡಿದ ಕೈಗನ್ನಡಿ.
ಇಲ್ಲೂ ರಾಜಕೀಯ, ಅಂತಃಕಲಹ,ಅಸೂಯೆ, ಕಾಲೆಳೆಯುವಿಕೆ ಎಲ್ಲ ಇದೆ. ಆದರೆ ಎಲ್ಲೂ ಅಚ್ಚಾಗುವುದಿಲ್ಲ
-ವಿಶ್ವನಾಥ ಸುಂಕಸಾಳ
vishwasunkasal@yahoo.com