ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಹೆಣ್ಣಿನ ನೈಟಿಗೂ ಗಂಡಿನ ನೈಂಟಿಗೂ ವ್ಯತ್ಯಾಸ ಏನು?
ಒಂದು ಮಾನ ಮುಚ್ಚೋಕೆ, ಇನ್ನೊಂದು ಮಾನ ಕಳೆಯೋಕೆ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಆಶೀರ್ವಾದಕ್ಕೆ ಮಕ್ಕಳಾಗುವಂತಿದ್ದರೆ?
ಇಷ್ಟೆಲ್ಲ ಫರ್ಟಿಲಿಟಿ ಸೆಂಟರ್ಗಳ ಅಗತ್ಯವೇ ಇರುತ್ತಿರಲಿಲ್ಲ!
ಡಬ್ಲ್ಯು.ಕೆ. ವೆಂಕಟೇಶಮೂರ್ತಿ, ಭೂಪಸಂದ್ರ, ಬೆಂಗಳೂರು
ಜ್ಞಾನಿಗಳಿಗೂ ಕೆಲವೊಮ್ಮೆ ಅಜ್ಞಾನ ಕವಿಯುವುದುಂಟೇ?
ಕೆಲವು ಬುದ್ಧಿಜೀವಿಗಳನ್ನು ನೋಡಿದಾಗ ಹಾಗನ್ನಿಸುತ್ತದೆ!
ನೇರಲಗುಡ್ಡ ಶಿವಕುಮಾರ, ಶಿರಾ, 9480343742
ಕಾಸಿಗೂ ಕೂಸಿಗೂ ಇರುವ ವ್ಯತ್ಯಾಸವೇನು?
ಕಾಸು ಕೊಟ್ರೆ ಕೂಸು ಸಿಗಲ್ಲ, ಕೂಸಿದ್ರೆ ಕಾಸು ಇದ್ದಷ್ಟೂ ಸಾಕಾಗಲ್ಲ.
ಕೆ.ವಿ. ಶಿವಕುಮಾರ, ಎಚ್.ಡಿ. ಕೋಟೆ
ಅಂಬಿ ಬಣ ರಮ್ಯಗೆ ಕೈ ಕೊಟ್ಟರಂತೆ?
ದಡ ದಾಟಿದ ಮೇಲೆ 'ಅಂಬಿ'ಗನ ಹಂಗೇಕೆ ಎಂಬಂತೆ ವರ್ತಿಸಿದರೆ ಸುಮ್ಕೆ ಬಿಟ್ಟಾರಾ!
ಬಾಣಭಟ್ಟ