ಎ.ಎಚ್. ಪ್ರಕಾಶಕುಮಾರ, 9886016328
ಕುರಿ ಕೋಳಿಯನ್ನು ಸೋಮವಾರ ಮತ್ತು ಶನಿವಾರ ತಿನ್ನಬಾರದು ಅಂತಾರೆ ಯಾಕೆ?
ಅದೆರಡು ದಿನವಾದರೂ ಅವು ನೆಮ್ಮದಿಯಿಂದ ಇರ್ಲಿ ಅಂತ!
ಡಬ್ಲ್ಯು.ಕೆ. ವೆಂಕಟೇಶಮೂರ್ತಿ, ಬೆಂಗಳೂರು
ಪರೀಕ್ಷಾ ಜ್ವರಕ್ಕೂ ಚುನಾವಣೆ ಜ್ವರಕ್ಕೂ ಏನು ವ್ಯತ್ಯಾಸ?
ಒಂದು ಮಕ್ಕಳಿಗೆ ಬರುತ್ತದೆ, ಇನ್ನೊಂದು ದೊಡ್ಡವರಿಗೆ!
ಪ್ರಶಾಂತ ಹೆಗಡೆ, ಮಲ್ಲೇಶ್ವರಂ
ದಿಗ್ವಿಜಯ್ ಸಿಂಗ್ ಮತ್ತು ಅಮೃತಾ ಅವರ ಪ್ರಕರಣದಿಂದ ತಿಳಿದುಬರುವ ನೀತಿಯೇನು?
ಅಪ್ಪಿಕೊಂಡ ಮೇಲೆ ಒಪ್ಪಿಕೊಳ್ಳಲೇಬೇಕು!
ಎ.ಎಚ್. ಪ್ರಕಾಶಕುಮಾರ್, 9886016328
ಚಿತ್ರರಂಗದಿಂದ ನಟ ನಟಿಯರು ರಾಜಕೀಯಕ್ಕೆ ಆಗಮಿಸುತ್ತಿದ್ದಾರೆ. ರಾಜಕೀಯದಲ್ಲಿ ಅಂತಹ ಶಕ್ತಿ ಏನಿರಬಹುದು?
ಡಿಗ್ಗಿಯನ್ನು ನೋಡಿದರೆ ನನಗೂ ಅನುಮಾನವಾಗುತ್ತಿದೆ. ಅಂತಹ ಶಕ್ತಿ ಏನಿರಬಹುದು?!
ವಿ. ಹೇಮಂತಕುಮಾರ, 9035992900
ಕರಗಿ ಹೋಗುವ ಐಸ್ಗೂ ಕಳೆದು ಹೋಗುವ ಯೌವನಕ್ಕೂ ವ್ಯತ್ಯಾಸವೇನು?
ಐಸ್ ಕರಗಿ ಆದ ನೀರನ್ನು ಮತ್ತೆ ಐಸ್ ಮಾಡಬಹುದು!
- ಬಾಣಭಟ್ಟ