ಕೋಲ್ಯನ ಮನೆ ಜಂತಿಯಿಂದ ಹಾವೊಂದು ನೇತಾಡುತ್ತಿತ್ತು. ಅದನ್ನು ನೋಡಿದವನೇ ಕೋಲ್ಯ ಜೋರಾಗಿ ಕೂಗಿದ. "ಬರೀ ನೇತಾಡೋದ್ರಿಂದ ಹೈಟ್ ಬೆಳಿಯೋಲ್ಲ. ಅಮ್ಮನಿಗೆ ಹೇಳು ಕಾಂಪ್ಲ್ಯಾನ್ ಕುಡಿಸೋಕ್ಕೆ!"
***
ಕೋಲ್ಯ ಆಸ್ಪತ್ರೆಯ ಐಸಿಯುನಲ್ಲಿದ್ದ ತನ್ನ ಚೀನಿ ಗೆಳೆಯನನ್ನು ನೋಡಲು ಹೋದ. ಚೀನಿ ಗೆಳೆಯ: "ಖಾಪು ಚೀ ಕ್ವಾಂಯ್ ಕೋಲ್ಯ, ಖ್ವಾಪು ಚೀ ಕೇ..." ಎಂದು ಜೋರಾಗಿ ತೇಕುತ್ತಾ ಸತ್ತು ಹೋದ. ಕೋಲ್ಯ ಆ ಸಾಲಿನ ಅರ್ಥ ಕೇಳಲು ಚೀನಾಕ್ಕೆ ಹೋದ. ಅದರರ್ಥ ಹೀಗಿತ್ತು: "ಲೇ ಕೋಲ್ಯ ನನ್ನ ಮಗನೇ, ಆಕ್ಸಿಜನ್ ಪೈಪ್ ಮೇಲಿಂದ ಕಾಲು ತೆಗೀಯೋ ಉಸಿರಾಡೋಕ್ಕೆ ಆಗ್ತಾ ಇಲ್ಲ!"