ಬಹುತೇಕ ಸಂದರ್ಭಗಳಲ್ಲಿ ನಾವು ಜನರನ್ನು ನಮಗೆ ಬೇಕಾದ ರೀತಿಯಲ್ಲಿ ಅಳೆಯುತ್ತೇವೆ. ಅವರು ನಮ್ಮ ನಿರೀಕ್ಷೆಗೆ ತಕ್ಕಂತೆ ವರ್ತಿಸಬೇಕೆಂದು ಬಯಸುತ್ತೇವೆ. ಆದರೆ ನಮ್ಮ ನಿರೀಕ್ಷೆಗೆ ಪೂರಕವಾಗಿ ನಡೆದುಕೊಳ್ಳದಿದ್ದರೆ ತಪ್ಪಾಗಿ ಭಾವಿಸುತ್ತೇವೆ. ಬೇರೆಯವರನ್ನು ತಪ್ಪು ಎಂದು ನಿರ್ಧರಿಸುವಾಗ ನಮ್ಮ ನಡೆ ಎಂಥದು ಎಂಬುದೂ ಮುಖ್ಯ.