ಅರವತ್ತೇಳರ ಹರೆಯದಲ್ಲೂ ದಿಗ್ವಿಜಯ ಸಿಂಗ್‌ಗೆ...

Updated on: 

ಫ್ಯಾಷನ್ ಡಿಸೈನರ್ ಮಧು, 9945737427
ಅರವತ್ತೇಳರ ಹರೆಯದಲ್ಲೂ ದಿಗ್ವಿಜಯ ಸಿಂಗ್‌ಗೆ ಪ್ರೇಮ-ಕಾಮದ ಹೂವು ಸೊಗಸಾಗಿ ಅರಳಿ ನಿಂತಿದೆಯಲ್ಲ?
ಎಲ್ಲ ಮಾತ್ರೆ ಪ್ರಭಾವ!

ತಲವಾಟ ಮಂಜುನಾಥ, ಸಾಗರ, 9480931611
ಅಟ್ಟಕ್ಕೆ ಹಾರಲಾಗದಿದ್ದರೂ ಬೆಟ್ಟಕ್ಕೆ ಹಾರುವ ಪ್ರಯತ್ನ ಮಾಡುತ್ತಾರಲ್ಲ ಯಾಕೆ?
ಚಟ್ಟಕ್ಕೆ ಹತ್ತುವ ಮುನ್ನ ಬೆಟ್ಟಕ್ಕೆ ಹಾರುವ ಪ್ರಯತ್ನದಲ್ಲಿ ಅಟ್ಟವನ್ನಾದರೂ ಹತ್ತೋಣ ಅಂತ!

ತಲವಾಟ ಮಂಜುನಾಥ, 9480931611
ಹೆಂಡ್ತಿಗೂ ಗಡಿಯಾರಕ್ಕೂ ಇರುವ ವ್ಯತ್ಯಾಸವೇನು?
ಸರಿಯಿಲ್ಲ ಅನ್ನಿಸಿದರೆ ಗಡಿಯಾರವನ್ನು ರಿಸೆಟ್ ಮಾಡುವ ಅವಕಾಶವಿದೆ!

ಪಿ.ಜಿ. ರಾಜ್. ಶಿವಮೊಗ್ಗ, 9739363071
ಯಾವುದಕ್ಕೂ ಜಗ್ಗದ ಹುಡುಗಿಯರು ತಣ್ಣನೆಯ ಐಸ್‌ಕ್ರೀಂಗೆ ಮಂಜಿನಂತೆ ಕರಗುತ್ತಾರಲ್ಲಾ?
ಹೌದೌದು. ಮದುವೆಗೂ ಮೊದಲು ಐಸ್‌ಕ್ರೀಂನಂತೆ ಕರಂಗಿ ಮತ್ತೆ ಚಿನ್ನದಂತೆ ಗಟ್ಟಿಯಾಗುತ್ತಾರೆ!

ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಸ್ತ್ರೀ ಸ್ವಾತಂತ್ರ್ಯ ನೀಡುವಲ್ಲಿ ಅಮೆರಿಕವೇ ಮುಂದಿದ್ದರೂ, ಅಧ್ಯಕ್ಷ ಪದವಿಗೇಕೆ ಆಯ್ಕೆಯಾಗಿಲ್ಲ?
ಒಂದಿಬ್ಬರು ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ಅಥವಾ ಅಧಿಕಾರ ಕೊಟ್ಟಾಕ್ಷಣ ಮಹಿಳೆಯರೆಲ್ಲ ಉದ್ಧಾರವಾಗುತ್ತಾರೆಂಬ ಮೂಢನಂಬಿಕೆ ಅವರಿಗಿಲ್ಲ!


 -ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com