ಹಣ ಕದ್ದರೆ ಕಳ್ಳ ಅಂತಾರೆ. ಹೃದಯ ಕದ್ದರೆ?

Updated on: 

ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 9901257137
ಹಣ ಕದ್ದರೆ ಕಳ್ಳ ಅಂತಾರೆ. ಹೃದಯ ಕದ್ದರೆ?
ಛೀ ಕಳ್ಳ ಅಂತಾರೆ!

ಚಿರಪ್ರಭ ನಂಜನಗೂಡು, 8553793107
ಭಾರತದ ರಾಜಕೀಯ ರಂಗದಲ್ಲಿ ನಿಜವಾದ ನಪುಂಸಕರ್ಯಾರು?
67 ವರ್ಷದಲ್ಲೇ 'ದಿಗ್ವಿಜಯ'ಕ್ಕೆ ಹೊರಟವರಿದ್ದಾರೆ. ಇನ್ನು ನಪುಂಸಕರನ್ನು ಎಲ್ಲಿಂದ ಹುಡುಕೋದು!

ನೇರಲಗುಡ್ಡ ಶಿವಕುಮಾರ, 9480343742
ಯುವ ಜನರಲ್ಲಿ ನೈತಿಕತೆಯ ಕೊರತೆ ಎದ್ದು ಕಾಣುತ್ತಿದೆಯಂತೆ?
ವಯಸ್ಸಾದವರಲ್ಲೇ ಇಲ್ಲ, ಇನ್ನು ಯುವಕರಲ್ಲಿ ಎಲ್ಲಿ ಹುಡುಕೋಣ!

ನೇತ್ರಾ ಆನೆಕೆರೆ ಬೀದಿ, ಮಂಡ್ಯ, 8970452188
ಹಿಂದೆಲ್ಲಾ ಸಾವಿರ ಕುದುರೆಗಳ ಸರದಾರರಿರುತ್ತಿದ್ದರು. ಈಗ?
ಸಾವಿರ ಎಕರೆ ಸರದಾರರು!

ಫ್ಯಾಷನ್ ಡಿಸೈನರ್ ಮಧು, 9945737427
ಗುಟ್ಟಾಗಿ ಪ್ರಿಂಟ್ ಮಾಡಿದ್ದು ನಾನೇ ಅಂತ ರಸಿಕ ಮುದುಕ ಎನ್.ಡಿ. ತಿವಾರಿ ಒಪ್ಪಿಕೊಂಡರಂತೆ?
ಅವರಿಗಿಂತ ನಾನೇನು ಕಮ್ಮಿಯಿಲ್ಲ. ಓಪನ್ ಆಗೇ ಪ್ರಿಂಟ್ ಮಾಡ್ತೀನಿ ಅಂತ ಟ್ವೀಟ್ ಮಾಡಿದ್ರಂತೆ ಡಿಗ್ಗಿ!


- ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com